Home News Varthur Santhosh: ವರ್ತೂರು ಸಂತೋಷ್ ಗೆ ಬೇಲ್ ಸಿಗುತ್ತಾ? ಮತ್ತೆ ಬಿಗ್ ಬಾಸ್ ಗೆ ಹೋಗ್ತಾರ?...

Varthur Santhosh: ವರ್ತೂರು ಸಂತೋಷ್ ಗೆ ಬೇಲ್ ಸಿಗುತ್ತಾ? ಮತ್ತೆ ಬಿಗ್ ಬಾಸ್ ಗೆ ಹೋಗ್ತಾರ? ವಕೀಲರು ಹೇಳಿದ್ದು ಹೀಗೆ

Varthur Santhosh

Hindu neighbor gifts plot of land

Hindu neighbour gifts land to Muslim journalist

ಹುಲಿ ಉಗುರು ಪ್ರಕರಣದಲ್ಲಿ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ನೇರವಾಗಿ ವಿಚಾರಕ್ಕೆ ಒಳಪಡಿಸಿದ್ದರು. ಈ ತನಿಖೆಗಳ ನಡುವೆಯೇ ಅದೆಷ್ಟೋ ಸಿನಿಮ ನಟರ ಹೆಸರುಗಳು ಕೂಡ ಹೊರ ಬಂದಿದೆ. ಆದರೆ ನಮಗೆಲ್ಲ ಕೊನೆದಾಗಿ ಉಳಿದಿರುವ ಪ್ರಶ್ನೆ ಏನೆಂದರೆ, ಸಂತೋಷ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತಾರಾ ಎಂದು. ಇವರ ಪರ ವಕೀಲರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಪರ ವಕೀಲ ಕೆ. ನಟರಾಜ್ ಹೇಳಿಕೆ ನೀಡಿದ್ದಾರೆ. ವರ್ತೂರು ಸಂತೋಷ್ ಕೃಷಿಕ ಹಿನ್ನೆಲೆಯಿಂದ ಬಂದವರು, ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ವ್ಯಕ್ತಿ ಅಲ್ಲ, ಬಹಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದ ಹುಲಿ ಉಗುರು ಅದು.

ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್,ನಿಖಿಲ್ ಅವರೆಗೆಲ್ಲಾ ನೋಟೀಸ್ ನೀಡಿದ್ದಾರೆ. ಅವರ ಬಳಿ ಇದ್ದ ಪೆಂಡೆಂಟ್ ವಶಕ್ಕೆ ಪಡೆದು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಆದರೆ ವರ್ತೂರು ಸಂತೋಷ್ ವಿರುದ್ದ ಅರಣ್ಯಾಧಿಕಾರಿಗಳು ಕ್ರಮ ಸರಿಯಲ್ಲ.

ವರ್ತೂರು ಸಂತೋಷ್ ವಿರುದ್ದ ಹುಲಿಯನ್ನು ಕೊಂದು, ಉಗುರು ತಂದಿರುವಂತ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಿದ್ದಾರೆ. ಈ ಹಿನ್ನಲೆ ಮಾನ್ಯ ನ್ಯಾಯಾಲಯ ನಮ್ಮ ವಾದ ಪುರಸ್ಕರಿಸಿ ಜಾಮೀನು ನೀಡುವ ವಿಶ್ವಾಸವಿದೆ. ನಾಳೆ ಜಾಮೀನು ಅರ್ಜಿ ತೀರ್ಪನ್ನ ನ್ಯಾಯಾಲಯ ಕಾಯ್ದಿರಿಸಿದ್ದಾರೆ.
ನಾಳೆ ನ್ಯಾಯಾಲಯ ಸಂತೋಷ್ ಗೆ ಜಾಮೀನು ಆದೇಶ ನೀಡುವ ವಿಶ್ವಾಸವಿದೆ ಎಂದು ವರ್ತೂರು ಸಂತೋಷ್ ಪರ ವಕೀಲ ಕೆ.ನಟರಾಜ್ ಹೇಳಿಕೆ ನೀಡಿದ್ದಾರೆ.

 

ಇದನ್ನು ಓದಿ: DA Hike: ರಾಜ್ಯ ಸರ್ಕಾರಿ ನೌಕರರಿಗೂ ಭರ್ಜರಿ ಗುಡ್ ನ್ಯೂಸ್ – ದೀಪಾವಳಿ ಮುನ್ನ ‘ಡಿಎ’ ಯಲ್ಲಿ ಭಾರೀ ಏರಿಕೆ !!