Home News Bhatkal: ಭಟ್ಕಳ: ಸಮುದ್ರ ತೀರದಲ್ಲಿ ಅನಾಮಿಕ ಕಂಟೈನರ್ ಹಡಗು: ಕಾವಲು ಪಡೆಯಿಂದ ಪರಿಶೀಲನೆ!

Bhatkal: ಭಟ್ಕಳ: ಸಮುದ್ರ ತೀರದಲ್ಲಿ ಅನಾಮಿಕ ಕಂಟೈನರ್ ಹಡಗು: ಕಾವಲು ಪಡೆಯಿಂದ ಪರಿಶೀಲನೆ!

Hindu neighbor gifts plot of land

Hindu neighbour gifts land to Muslim journalist

Bhatkal: ಜಾಲಿ ಕೋಡಿ ಸಮುದ್ರ ತೀರದಲ್ಲಿ ಕಂಟೈನ‌ರ್ ಬೋಟ್ ಒಂದು ತೇಲಿಕೊಂಡು ಬಂದು ಸಿಲುಕಿ ಹಾಕಿಕೊಂಡಿದ್ದು, ಎಲ್ಲಿಂದ ಬಂತು, ಹೇಗೆ ಬಂತು ಎನ್ನುವ ಕುರಿತು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಸ್ಥಳೀಯರು ಹೇಳುವ ಪ್ರಕಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬೃಹತ್‌ ಗಾತ್ರದ (30 ಮೀಟರ್‌ಗೂ ಹೆಚ್ಚು ಉದ್ದ, 8 ಮೀಟರ್‌ನಷ್ಟು ಅಗಲ) ಈ ಕಂಟೈನ‌ರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿ ಹಾಕಿಕೊಂಡಿದೆ.

ಕಂಟೈನರ್‌ನಲ್ಲಿ ಹಾನಿಯಾದ ಬಗ್ಗೆ ಕಂಡು ಬರುತ್ತಿಲ್ಲ. ಇದು ಯಾವುದೇ ಶಿಪ್‌ನಿಂದ ಪ್ರತ್ಯೇಕಗೊಂಡು ಸಮುದ್ರದಲ್ಲಿ ತೇಲಿ ಬಂದಿರಬೇಕು ಎಂದು ಅಂದಾಜಿಸಲಾಗಿದ್ದು ನಿಖರ ಕಾರಣ ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ. ಕಂಟೇನರ್ ಕೊಚ್ಚಿನ್ ಶಿಪ್ ಯಾರ್ಡ್ ಎನ್ನುವ ನಾಮ ಫಲಕ ಹೊಂದಿದು ಇದು ಕೇರಳದಿಂದ ಬೇರೆ ದೇಶಕ್ಕೆ ಸಾಗಾಟ ಮಾಡುತ್ತಿರುವಾಗ ಹಡಗಿನಿಂದ ಬೇರ್ಪಟ್ಟು ಬಂದಿರುವ ಶಂಕೆ ವ್ಯಕ್ತವಾಗಿದೆ.