Home News Technology Scams: ಡಿಜಿಟಲ್ ಯುಗದಲ್ಲಿ ಹೀಗೂ ಮೋಸ ಹೋಗ್ತೀರಾ ಎಚ್ಚರ! ಅರೆ ಕ್ಷಣದಲ್ಲಿ ನಿಮ್ಮ ಖಜಾನೆ...

Technology Scams: ಡಿಜಿಟಲ್ ಯುಗದಲ್ಲಿ ಹೀಗೂ ಮೋಸ ಹೋಗ್ತೀರಾ ಎಚ್ಚರ! ಅರೆ ಕ್ಷಣದಲ್ಲಿ ನಿಮ್ಮ ಖಜಾನೆ ಖಾಲಿ ಖಾಲಿ

Hindu neighbor gifts plot of land

Hindu neighbour gifts land to Muslim journalist

Technology Scams: ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಹಣ ವರ್ಗಾವಣೆಯಿಂದ ಹಿಡಿದು ಆಹಾರ ಸೇರಿದಂತೆ ಎಷ್ಟೇ ದುಬಾರಿ ವಸ್ತುಗಳನ್ನು ಸಹ ಜೆಸ್ಟ್ ಒಂದು ಕ್ಲಿಕ್ ಮೂಲಕ ಪಡೆಯಲು ಡಿಜಿಟಲ್ ಮಾಧ್ಯಮ ಅನುವು ಮಾಡಿ ಕೊಟ್ಟಿದೆ. ಒಳ್ಳೆಯದು ಇದ್ದಲ್ಲಿ ಕೆಟ್ಟದ್ದು ಇರುತ್ತೆ ಎಂಬ ಮಾತು ಕೇಳಿರಬಹುದು. ಅಂತೆಯೇ ಜೆಸ್ಟ್ ಒಂದು ಕ್ಲಿಕ್ ಅಥವಾ ಒಟಿಪಿ ಮೂಲಕ ಜನರನ್ನು ಮೋಸ (Technology Scams) ಮಾಡಲು ಕೂಡಾ ಸಾಧ್ಯವಿದೆ.

ಹೌದು, ಮೊಬೈಲ್ ಫೋನ್‌ಗಳಲ್ಲಿ ಬರುವ ಒಟಿಪಿ ಇನ್ನೊಬ್ಬರಲ್ಲಿ ಹಂಚಿಕೊಂಡರೆ, ತಕ್ಷಣ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಒಟಿಪಿ ವಂಚನೆಯಿಂದ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಮಂದಿ ಹಣ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಫೋನ್‌ನಲ್ಲಿ ಹೇಳಬಾರದು ಎಂದು ಸರ್ಕಾರದ ಸೈಬರ್ ಭದ್ರತಾ ಇಲಾಖೆ ಎಚ್ಚರಿಸಿದೆ.

ನೀವು ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡುವುದು ಅಥವಾ ಫೋನ್‌ನಲ್ಲಿ ಏನನ್ನಾದರೂ ಡೌನ್‌ಲೋಡ್ ಮಾಡಬಾರದು. ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗಲೂ ಜಾಗರೂಕರಾಗಿರಬೇಕು. ಇನ್ನು ಯಾವುದೇ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಬೇಡಿ ಮತ್ತು ಫೋನ್‌ನಲ್ಲಿ ಬರುವ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ ಅಥವಾ ಒಟಿಪಿಯನ್ನು ಹಂಚಿಕೊಳ್ಳಬೇಡಿ.

ನಿಮ್ಮ ಫೋನ್‌ನ ಡೇಟಾ ಅಥವಾ ವೈಫೈ ಬಳಸಿ ಹಣಕಾಸಿನ ವ್ಯವಹಾರಗಳನ್ನು ಮಾಡಿ. ಆದ್ರೆ ಸಾರ್ವಜನಿಕ ವೈಫೈ ಬಳಸುವುದು ಅಪಾಯಕಾರಿ. ಇನ್ನು ಇಮೇಲ್, SMS, WhatsApp ನಲ್ಲಿ ತಿಳಿಯದ ಸಂಖ್ಯೆಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಯಾವುದೇ ಸಂದೇಶ ಅಥವಾ ಇಮೇಲ್ ಒಟಿಪಿ ಜೊತೆ ಬಂದರೆ ಅಥವಾ ವೈಯಕ್ತಿಕ ಮಾಹಿತಿ ಕೇಳಿದರೆ, ಎಚ್ಚರಿಕೆಯಿಂದಿರಿ. ಅಗತ್ಯವಿದ್ದರೆ ಬ್ಯಾಂಕ್ ಮತ್ತು ಪೊಲೀಸ್ ಠಾಣೆಗೆ ತಿಳಿಸಿ.

ಮುಖ್ಯವಾಗಿ ಯಾವುದೇ ಬ್ಯಾಂಕ್ ಅಥವಾ ಯಾವುದೇ ಸಂಸ್ಥೆಯ ಪ್ರತಿನಿಧಿ ಕರೆ ಮಾಡಿದರೆ ಆಧಾರ್, ಪ್ಯಾನ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ, ಡೆಬಿಟ್ ಕಾರ್ಡ್‌ನ ಮುಕ್ತಾಯ ದಿನಾಂಕ, ಜನ್ಮ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರೆ ಯಾವುದೇ ಗುರುತನ್ನು ನೀಡಬೇಡಿ. ಇನ್ನು ಟೆಲಿಗ್ರಾಮ್ ಅಥವಾ ಇತರ ಅಪ್ಲಿಕೇಶನ್‌ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ನೆಪದಲ್ಲಿ ವಂಚನೆ ಹೆಚ್ಚುತ್ತಿದೆ. ಮುಖ್ಯವಾಗಿ ಕ್ರಿಪ್ಟೋಕರೆನ್ಸಿ (ಖಾಸಗಿ ವರ್ಚುವಲ್ ಕರೆನ್ಸಿ) ಮತ್ತು ಶೇರು ಮಾರುಕಟ್ಟೆಯ ಹೊಸ ಐಪಿಒಗಳಲ್ಲಿ ಹೂಡಿಕೆ ಮಾಡುವುದು ಮಾಡಬೇಡಿ.