Home News Pak-Iran: ‘ಇರಾನ್‌ ಮೇಲೆ ಪರಮಾಣು ದಾಳಿ ಮಾಡಿದ್ರೆ ಹುಷಾರ್ – ಪಾಕ್ ಇಸ್ರೇಲ್ ಮೇಲೆ ಪರಮಾಣು...

Pak-Iran: ‘ಇರಾನ್‌ ಮೇಲೆ ಪರಮಾಣು ದಾಳಿ ಮಾಡಿದ್ರೆ ಹುಷಾರ್ – ಪಾಕ್ ಇಸ್ರೇಲ್ ಮೇಲೆ ಪರಮಾಣು ಬಾಂಬ್ ಹಾಕುತ್ತದೆ’ – ಇರಾನ್ ಅಧಿಕಾರಿ

Hindu neighbor gifts plot of land

Hindu neighbour gifts land to Muslim journalist

ಇರಾನ್ ವಿರುದ್ಧದ ಸಂಘರ್ಷದಲ್ಲಿ ಇಸ್ರೇಲ್‌ ಪರಮಾಣು ಕ್ಷಿಪಣಿಗಳನ್ನು ಬಳಸಿದರೆ ಅದರ ವಿರುದ್ದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಪಾಕಿಸ್ತಾನ ಇರಾನ್‌ಗೆ ತಿಳಿಸಿದೆ ಎಂದು ಟರ್ಕಿಯ ಟುಡೇ ವರದಿ ಮಾಡಿದೆ. ಹಿರಿಯ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜನರಲ್ ಮತ್ತು ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮೊಸ್ಸೆನ್ ರೆಜೈ ಇರಾನಿನ ರಾಜ್ಯ ಟಿವಿ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಿದ್ದಾರೆ. ಆದರೆ ಪಾಕಿಸ್ತಾನ ಅಧಿಕೃತವಾಗಿ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದಿಂದ ಇರಾನ್ ಗೆ ಬೆಂಬಲ – ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಒಂದಾಗುವಂತೆ ಕರೆ
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಪಾಕಿಸ್ತಾನವು ಇರಾನ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಇತರ ಮುಸ್ಲಿಂ ರಾಷ್ಟ್ರಗಳಿಗೆ ಒಗ್ಗೂಡುವಂತೆ ಕರೆ ನೀಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಆಸಿಫ್ ಇವರು, “ಇರಾನ್ ಮೇಲೆ ನಡೆದ ದಾಳಿ ತಪ್ಪು ರೀತಿಯಲ್ಲಾಗಿದೆ. ನಾವು ಇರಾನ್ ಜೊತೆ ನಿಲ್ಲುತ್ತೇವೆ. ನಾವು ಈ ದಾಳಿಯನ್ನು ಖಂಡಿಸುತ್ತೇವೆ. ಗಾಜಾ ಮೇಲಿನ ದಾಳಿಯ ಸಮಯದಲ್ಲಿ ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಒಗ್ಗೂಡುವಂತೆ ಕರೆ ನೀಡಲಾಗಿತ್ತು. ಒಂದು ವೇಳೆ ಎಲ್ಲ ಮುಸ್ಲಿಂ ರಾಷ್ಟ್ರಗಳು ಒಂದಾಗದಿದ್ದರೆ, ಮುಂದೆ ಏನಾದರೂ ಆಗಬಹುದು ಎಂದಿವೆ.