Home News Bengaluru : ‘ನಾವು ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೊಡಲ್ಲ’- ಬೆಂಗಳೂರಲ್ಲಿ ಪ್ರತಿಷ್ಠಿತ ಸಂಸ್ಥೆ ಹೇಳಿಕೆ

Bengaluru : ‘ನಾವು ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೊಡಲ್ಲ’- ಬೆಂಗಳೂರಲ್ಲಿ ಪ್ರತಿಷ್ಠಿತ ಸಂಸ್ಥೆ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Bengaluru : ಇಂದು ನವೆಂಬರ್ 1, ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಇಡೀ ನವೆಂಬರ್ ತಿಂಗಳು ಕನ್ನಡ ಮಯವಾಗಿ ರೂಪಗೊಂಡಿರುತ್ತದೆ. ಬೆಂಗಳೂರು ಸೇರಿದಂತೆ ನಾಡಿನ ವಿವಿಧ ಮೂಲೆಗಳಲ್ಲಿ, ಇಂದು ಸಂಭ್ರಮದಿಂದ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದು ನಮ್ಮಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೊಡಲ್ಲ ಎಂದು ಹೇಳಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ನೆಲದಲ್ಲೇ ಕನ್ನಡಕ್ಕೆ ಭಾರಿ ಅವಮಾನ ಉಂಟಾಗುತ್ತಿದೆ. ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ಇದರ ನಡುವೆ ಇದೀಗ ರಾಜ್ಯದಲ್ಲೇ ಇರುವ ಪ್ರತಿಷ್ಠಿತ ಸಂಸ್ಥೆಯೊಂದು ಕನ್ನಡ ರಾಜ್ಯೋತ್ಸವದ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದೆ.

ಈ ಬೆನ್ನಲ್ಲೇ ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಗುಡುಗಿದ್ದು ಬೆಂಗಳೂರು ಹೈಟೆಕ್ ಲಿಮಿಟೆಡ್‌ನಂತಹ (ಬಿಎಚ್‌ಎಲ್) ಸಂಸ್ಥೆಯೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಬಯಸಿದರೆ, “ನಾವು ಅನುಮತಿ ನೀಡುವುದಿಲ್ಲ, ನಿಮ್ಮ ಕನ್ನಡ ಸಂಘ ಅಧಿಕೃತವಲ್ಲ, ರಾಜ್ಯೋತ್ಸವಕ್ಕೆ ಅನುಮತಿ ಇಲ್ಲ” ಎಂದು ಹೇಳುವ ಮಟ್ಟಕ್ಕೆ ತಲುಪಿದೆಯಲ್ಲವೇ? ಅದಕ್ಕಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಪಡೆಯಲು ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಕನ್ನಡಿಗರಿಗೆ ಬಂದಿದ್ದರೆ, ಇದು ನಮ್ಮ ಸಾಂಸ್ಕೃತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.