Home News Bangalore Stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಪತಿ ಎದುರಿನಲ್ಲೇ ಪ್ರಾಣಬಿಟ್ಟ ಮುಲ್ಕಿ ಯುವತಿ

Bangalore Stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಪತಿ ಎದುರಿನಲ್ಲೇ ಪ್ರಾಣಬಿಟ್ಟ ಮುಲ್ಕಿ ಯುವತಿ

Hindu neighbor gifts plot of land

Hindu neighbour gifts land to Muslim journalist

Mulky: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೂಲ್ಕಿ ಮೂಲದ ಮಾನಂಪಾಡಿ ಬಳಿಯ ಯುವತಿಯೊಬ್ಬಳು ಪತಿ ಎದುರಿನಲ್ಲಿಯೇ ಮೃತಪಟ್ಟಿದ್ದಾರೆ.

ಅಕ್ಷತಾ ಪೈ ಮೃತ ಮಹಿಳೆ. ಸಿಎ ಪದವೀಧರೆಯಾಗಿದ್ದ ಅಕ್ಷತಾ ಪೈ ಒಂದೂವರೆ ವರ್ಷದ ಹಿಂದೆ ಉತ್ತರ ಕನ್ನಡ ಸಿದ್ದಾಪುರ ಮೂಲತಃ ಸಾಫ್ಟ್‌ವೇರ್‌ ಇಂಜಿನಿಯರ್‌ ಆಶಯ್‌ ಜೊತೆ ಮದುವೆಯಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ಉದ್ಯೋಗದಲ್ಲಿದ್ದರು.

ನಿನ್ನೆ ಮಧ್ಯಾಹ್ನ (ಬುಧವಾರ) ಮನೆಯಿಂದ ಹೊರಟ ಇವರು ಬೆಂಗಳೂರು ತಂಡದ ವಿಜಯೋತ್ಸವ ಸ್ಟೇಡಿಯಂ ಬಳಿ ಬರುತ್ತಿದ್ದಂತೆ ಏಕಾಏಕಿ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ, 11 ಮಂದಿ ಸಾವಿಗೀಡಾಗಿದ್ದು, ಅದರಲ್ಲಿ ಅಕ್ಷತಾ ಪೈ ಕೂಡಾ ಒಬ್ಬರು.

ಅಕ್ಷತಾ ಪೈ ಮನೆಮಂದಿ ಬಂದಿದ್ದು, ಮೃತ ಶರೀರವನ್ನು ಪತಿ ಆಶಯ್‌ ಮನೆ ಉತ್ತರಕನ್ನಡದ ಸಿದ್ದಾಪುರಕ್ಕೆ ಕೊಂಡೊಯ್ಯಲಾಗುತ್ತಿದೆ.