Home News Citizen Rights Foundation: ಬೆಂಗಳೂರು ಕಾಲ್ತುಳಿತ ಪ್ರಕರಣ: ಸರಕಾರವನ್ನು ಅಮಾನತಿನಲ್ಲಿಡಲು ರಾಜ್ಯಪಾಲರಿಗೆ ಪತ್ರ

Citizen Rights Foundation: ಬೆಂಗಳೂರು ಕಾಲ್ತುಳಿತ ಪ್ರಕರಣ: ಸರಕಾರವನ್ನು ಅಮಾನತಿನಲ್ಲಿಡಲು ರಾಜ್ಯಪಾಲರಿಗೆ ಪತ್ರ

Hindu neighbor gifts plot of land

Hindu neighbour gifts land to Muslim journalist

Citizen Rights Foundation: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ 11 ಜನ ಜೀವ ಕಳೆದುಕೊಂಡಿದ್ದಾರೆ. ಇದೀಗ ದುರಂತಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ಗೆ ಸಿಟಿಜನ್‌ ರೈಟ್ಸ್‌ ಫೌಂಡೇಶನ್‌ ಪತ್ರ ಬರೆದಿದೆ. ನ್ಯಾಯಾಂಗ ತನಿಖೆ ಪೂರ್ಣವಾಗುವವರೆಗೂ ರಾಜ್ಯ ಸರಕಾರವನ್ನು ಅಮಾನತಿನಲ್ಲಿಡಲು ಮನವಿ ಮಾಡಿದೆ.

ಸಿಟಿಜನ್‌ ರೈಟ್ಸ್‌ ಫೌಂಡೇಶನ್‌ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಈಗಾಗಲೇ ಬಿಟ್‌ಕಾಯಿನ್‌, ಕೋವಿಡ್‌, ಬಿಬಿಎಂಪಿ ಅಕ್ರಮಗಳು, ನಿವೇಶನ ಹಂಚಿಕೆ ಅಕ್ರಮ, ಕೆಐಎಡಿಬಿ ಅವ್ಯವಹಾರಗಳು, ವೈದ್ಯಕೀಯ ಶಿಕ್ಷಣ ಇಲಾಖೆಗಳ ಹಗರಣ ಸೇರಿ ಅನೇಕ ಪ್ರಕರಣಗಳ ಕುರಿತು ರಾಜ್ಯ ಸರಕಾರದ ಗಮನ ಸೆಳೆದಿದೆ.

‘ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ’ದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿರುವ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಜೊತೆಗೆ ತನಿಖೆ ಮುಗಿಯುವವರೆಗೂ 11 ಜನರ ಮಾರಣಹೋಮಕ್ಕೆ ನೇರ ಕಾರಣವಾಗಿರುವ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಬೇಕೆಂದು ಮನವಿ ಸಲ್ಲಿಸಲಾಗಿದೆ.