Home News Bangalore: ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳ ವಿರುದ್ಧ FIR

Bangalore: ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳ ವಿರುದ್ಧ FIR

Bengaluru
Image source: Ipleaders

Hindu neighbor gifts plot of land

Hindu neighbour gifts land to Muslim journalist

Bangalore: ಬೆಂಗಳೂರಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಕೆಪಿಎಂಇ ಕಾನೂನು ಉಲ್ಲಂಘಟನೆ ಮಾಡಿರುವ ಸಂಸ್ಥೆಗಳ ಮೇಲೆ ಡಿಸಿ ಜಗದೀಶ್‌ ಕ್ರಮ ಕೈಗೊಂಡಿದೆ. ಖಾಸಗಿ ಕ್ಲಿನಿಕ್‌, ಆಸ್ಪತ್ರೆ, ನರ್ಸಿಂಗ್‌ ಹೋಂ, ಲ್ಯಾಬ್ಗಳಿಗೆ ಪರವಾನಿಗೆ ಕಡ್ಡಾಯ. ಆದರೂ ಕೆಲವೊಂದು ಸಂಸ್ಥೆ ನಿಯಮ ಉಲ್ಲಂಘಟನೆ ಮಾಡಿದ್ದು, ಇದೀಗ ಇದರ ವಿರುದ್ಧ ದಂಡ ಶಿಕ್ಷೆ ಮತ್ತು ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಬೆಂಗಳೂರಿನಲ್ಲಿ 14 ವೈದ್ಯಕೀಯ ಸಂಸ್ಥೆಗಳಿಗೆ ಡಿಸಿ ಜಿ ಜಗದೀಶ್‌ ದಂಡ ವಿಧಿಸಿದ್ದಾರೆ. ಕಾನೂನು ಉಲ್ಲಂಘಿಸಿದ ಅಂದ್ರಹಳ್ಳಿ ಮಾರುತಿ ಕ್ಲಿನಿಕ್ ಗೆ 50 ಸಾವಿರ ದಂಡ, ಶಾರದ ಕ್ಲಿನಿಕ್ ಗೆ 25 ಸಾವಿರ, ಹುಸೈನ್ ಪಾಲಿ ಕ್ಲಿನಿಕ್‌ಗೆ 50 ಸಾವಿರ, ಶ್ರೀನಿವಾಸ್ ಆಸ್ಪತ್ರೆಗೆ 75 ಸಾವಿರ , ನಾಗಶೆಟ್ಟಿಹಳ್ಳಿ ಸ್ನೇಹ ಕ್ಲಿನಿಕ್ ಗೆ 25 ಸಾವಿರ ದಂಡ ವಿಧಿಸಲಾಗಿದೆ. 14 ವೈದ್ಯಕೀಯ ಸಂಸ್ಥೆಗಳಿಗೆ ಒಟ್ಟಾರೆಯಾಗಿ 6 ಲಕ್ಷ 15 ಸಾವಿರ ದಂಡ ಹಾಕಲಾಗಿದೆ.

ಕಾಮಾಕ್ಷಿಪಾಳ್ಯದಲ್ಲಿರುವ ಸಂಜೀವಿನಿ ಹೆಲ್ತ್ ಸೆಂಟರ್, ಕೋನಪ್ಪನ ಅಗ್ರಹಾರದ ಗೋವಿಂದಶೆಟ್ಟಿ ಪಾಳ್ಯದಲ್ಲಿರುವ ಇನ್ನಿನಿಟಿ ಕ್ಲಿನಿಕ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮುನಿಸ್ವಾಮಿ ಲೇಔಟ್‌ನಲ್ಲಿರುವ ಬಾಲಾಜಿಕ್ಲಿನಿಕ್‌ಗೆ ಕೂಡ ತಲಾ 50 ಸಾವಿರ ದಂಡ ಹಾಕಲಾಗಿದೆ. ಒಟ್ಟು 14 ಸಂಸ್ಥೆಗಳಿಗೆ 6.15 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಚಿಕ್ಕಬಾಣಾವರ ದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ₹75 ಸಾವಿರ ದಂಡ ಹಾಕಲಾಗಿದೆ. ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ ಅಂದ್ರಹಳ್ಳಿಯ ಮಾರುತಿ ಕ್ಲಿನಿಕ್, ಕಲ್ಯಾಣನಗರದ ಎಚ್‌ಎಸ್‌ಬಿಆ‌ರ್ ಲೇಔಟ್‌ನಲ್ಲಿರುವ ಟ್ರೈಲೈಫ್ ಆಸ್ಪತ್ರೆ, ಮಾರುತಿನಗರದಲ್ಲಿರುವ ಹುಸೈನ್ ಪಾಲಿ ಕ್ಲಿನಿಕ್, ಸಿಂಥನ್ ನಗರದ ವಿದ್ಯಾಸಾಗರ ಕ್ರಾಸ್‌ನಲ್ಲಿರುವ ಸುರಕ್ಷಾ ಆಸ್ಪತ್ರೆ, ಪೀಣ್ಯದ ಬಾಲಾಜಿನಗರದಲ್ಲಿರುವ ರೈಟ್ ಟೈಮ್ ಫೌಂಡೇಷನ್, ಕೆಂಗೇರಿ ಯಲ್ಲಿರುವ ಸಹನಾ ಫೌಂಡೇಷನ್ (ಸ್ಟೈಲ್ ಫೌಂಡೇಷನ್) ಪುನರ್ವಸತಿ ಕೇಂದ್ರಕ್ಕೆ ತಲಾ 50 ಸಾವಿರ ದಂಡ ವಿಧಿಸಲಾಗಿದೆ.

ತಿಗಳರಪಾಳ್ಯದಲ್ಲಿರುವ ಶಾರದಾ ಕ್ಲಿನಿಕ್ (ಮೌಲ್ಯ ಕ್ಲಿನಿಕ್), ನಾಗಶೆಟ್ಟಿಹಳ್ಳಿಯ ರೈಲ್ವೆ ಗೇಟ್ ಬಳಿಯಿರುವ ಸ್ನೇಹ ಕ್ಲಿನಿಕ್ ಹಾಗೂ ಬಸವೇಶ್ವರ ಲೇಔಟ್‌ನಲ್ಲಿರುವ ಫಸ್ಟ್ ಕೇರ್ ಸೂಪ‌ರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಆ್ಯಂಡ್ ಡಯಾಗೋಸಿಸ್ ಸೆಂಟರ್‌ ತಲಾ ₹25 ಸಾವಿರ ಮತ್ತು ಕನಕಪುರ ಮುಖ್ಯರಸ್ತೆಯಲ್ಲಿರುವ ಗಗನ ಡೆಂಟಲ್ ಕೇ‌ರ್ ಕ್ಲಿನಿಕ್‌ಗೆ 15 ಸಾವಿರ ದಂಡ ವಿಧಿಸಲಾಗಿದೆ.