Home News Bengaluru: CL-7 ಲೈಸೆನ್ಸ್‌ಗೆ ಲಂಚ ಪ್ರಕರಣ: ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ

Bengaluru: CL-7 ಲೈಸೆನ್ಸ್‌ಗೆ ಲಂಚ ಪ್ರಕರಣ: ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ

Hindu neighbor gifts plot of land

Hindu neighbour gifts land to Muslim journalist

Bengaluru: CL-7 ಲೈಸೆನ್ಸ್ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಡಿ ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರನ್ನು ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶಿಸಿದೆ.

ಬಂಧಿತರನ್ನು ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಎಂದು ಗುರುತಿಸಲಾಗಿದೆ. ಮೂವರು ಸಿಎಲ್-7 ಲೈಸೆನ್ಸ್ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. 

ಲೋಕಾಯುಕ್ತ ಪೊಲೀಸರು ಮೂವರನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿ, ಹಣ ಪಡೆದ ಕುರಿತು ಕೆಲ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಬಳಿಕ ಎಲ್ಲಾ ದಾಖಲೆಗಳ ಸಮೇತ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಏನಿದು CL-7 ಲೈಸೆನ್ಸ್:CL-7 ಲೈಸೆನ್ಸ್ ಎಂದರೆ ಕರ್ನಾಟಕದಲ್ಲಿನ ಹೋಟೆಲ್ ಮತ್ತು ವಸತಿ ಗೃಹಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವ ಮದ್ಯ ಪರವಾನಗಿ (Liquor Licence for Hotels and Boarding Houses). ಈ ಪರವಾನಗಿ ಹೊಂದಿರುವ ಹೋಟೆಲ್‌ಗಳು ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶವಿರುತ್ತದೆ.