Home News ಬೆಳ್ತಂಗಡಿ: ಸುಮಂತ್‌ ಸಾವು ಪ್ರಕರಣ: ಗೃಹ ಸಚಿವರನ್ನು ಆಗ್ರಹಿಸಿದ ಶಾಸಕ ಹರೀಶ್‌ ಪೂಂಜ

ಬೆಳ್ತಂಗಡಿ: ಸುಮಂತ್‌ ಸಾವು ಪ್ರಕರಣ: ಗೃಹ ಸಚಿವರನ್ನು ಆಗ್ರಹಿಸಿದ ಶಾಸಕ ಹರೀಶ್‌ ಪೂಂಜ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕುವೆಟ್ಟು ಗ್ರಾಮದ ಸುಮಂತ್ ಎನ್ನುವ ಬಾಲಕನ ಅನುಮಾಸ್ಪದ ಸಾವಿನ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ತನಿಖೆ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯತೆಯನ್ನು ಜನರ ಮುಂದಿಡಬೇಕೆಂದು ಮಾನ್ಯ ಗೃಹ ಸಚಿವರನ್ನು  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಆಗ್ರಹಿಸಿದ್ದಾರೆ.

ಈ ಪ್ರಕರಣದ ಕುರಿತು ಸತ್ಯಾಸತ್ಯತೆ ಹೊರಬರಬೇಕು ಎನ್ನುವ ಉದ್ದೇಶದಿಂದ ಮಾನ್ಯ ಗೃಹ ಸಚಿವರನ್ನು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆಗ್ರಹ ಮಾಡಿದ್ದಾರೆ.

ಸುಮಂತ್‌ನ ಸಾವಿನ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಕುಟುಂಬದವರ ಜೊತೆ ಸ್ಥಳೀಯರು ಕೂಡಾ ಸಾವಿನ ಕುರಿತು ಶಂಕೆ ವ್ಯಕ್ತ ಪಡಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ತನಿಖೆ ನಡೆಸಿ, ನಿಜವಾದ ಸತ್ಯ ಹೊರ ಬರಬೇಕು ಎಂದು ಒತ್ತಾಯಿಸಲಾಗಿದೆ.