Home News Belthangady: ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಹು ಕೋಟಿ ಹಗರಣ...

Belthangady: ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಹು ಕೋಟಿ ಹಗರಣ ಪ್ರಕರಣ: ಕೋರ್ಟ್ ಆದೇಶ ಹೀಗಿದೆ!

Hindu neighbor gifts plot of land

Hindu neighbour gifts land to Muslim journalist

Belthangady : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಳ್ತಂಗಡಿ (Belthangady) ಈ ಸಂಘದ 2023-24 ರ ಸಾಲಿನ ಲೆಕ್ಕಪರಿಶೋಧನೆಯಲ್ಲಿ ನಡೆದಿರುವ ಸುಮಾರು ಬಹು ಕೋಟಿ ಹಗರಣದ ಬಗ್ಗೆ ಸಹಕಾರಿ ಸಂಘದ ಉಪ ನಿಬಂಧಕರು 2023-24 ರಲ್ಲಿ ಜವಬ್ದಾರಿಯಲ್ಲಿದ್ದ 15 ಮಂದಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದು, ಇದರಿಂದ ಸೊಸೈಟಿಯ ಜವಾಬ್ದಾರಿ ವಹಿಸಿದ್ದ 10 ಮಂದಿಯ ಆಸ್ತಿಯನ್ನು ತೀರ್ಪು ಪೂರ್ವ ಜಪ್ತಿ ಮಾಡಿ ಜೂ.5 ರಂದು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯ ಆದೇಶ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.

ಜಪ್ತಿ ಪೂರ್ವ ಆಸ್ತಿ ಮುಟ್ಟುಗೋಳಿಗೆ ನೋಟಿಸ್‌ ಜಾರಿಯಾದವರ ವಿವರ:

ಅಧ್ಯಕ್ಷ ಸಿ.ಹೆಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ.ಆ‌ರ್.ನಾಯಕ್‌, ವಿಶ್ವನಾಥ, ಪ್ರಮೋದ್.ಆ‌ರ್.ನಾಯಕ್, ಕಿಶೋರ್ ಲಾಯಿಲ, ಪಿ.ಜಗನ್ನಾಥ್‌, ರತ್ನಾಕರ ಶೇರಿಗಾ‌ರ್, ನಯನ ಶಿವಪ್ರಸಾದ್‌, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಚಂದ್ರಕಾಂತ್,ಸಿಬ್ಬಂದಿ ಸರಿತಾ ಇವರು ಹತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ ಜೂ.5 ರಂದು ನೋಟಿಸ್‌ ಜಾರಿಯಾಗಿದೆ.

ನಗದು ಠೇವಣಿ ಇಡಲು ಅವಕಾಶ: ಒಂದು ವೇಳೆ ಆಸ್ತಿ ಜಪ್ತಿ ಆದೇಶವನ್ನು ತೆರವುಗೊಳಿಸಲು ಬಯಸಿದಲ್ಲಿ ಜೂ.20 ರ ಒಳಗೆ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು ನಗದು ಭದ್ರತೆಯಾಗಿ ಈ ನ್ಯಾಯಾಲಯದ ಪಿ.ಡಿ ಖಾತೆಯಲ್ಲಿ ನಿಗದಿತ ಅವಧಿಯೊಳಗೆ ಠೇವಣಿ ಇರಿಸತಕ್ಕದ್ದು ಇಲ್ಲವಾದರೆ ಆಸ್ತಿ ಮುಟ್ಟುಗೋಳು ಹಾಕಲಾಗುವುದಾಗಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಪ್ರಮುಖ ಆದೇಶ: ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ನೀಡಿರುವ ಆದೇಶದಲ್ಲಿ ಚರಾಸ್ತಿಯನ್ನು ಷರತ್ತಿಗೆ ಒಳಪಟ್ಟು ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ ಹೊರಡಿಸಿರುತ್ತೇನೆ. ಒಂದು ವೇಳೆ ಈ ಆದೇಶವನ್ನು ಅತಿಕ್ರಮಿಸಿ ಯಾರದರೂ ಜಪ್ತಿಗೊಳಪಟ್ಟ ಈ ಕೆಳಕಂಡ ಚರಾಸ್ತಿಯನ್ನು ಖರೀದಿಸಿದ್ದಲ್ಲಿ ಅಂತಹ ಹೊಣೆಗಾರಿಕೆಗೆ ಖರೀದಿಸಿದವರೇ ಸಂಪೂರ್ಣ ಹೊಣೆಗಾರರು ಆಗಿರುತ್ತಾರೆ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಿದ್ದಾರೆ.