Home News ಬೆಳ್ತಂಗಡಿ: ಪ್ರಸನ್ನ ಕಾಲೇಜು- ಅಭ್ಯಾಸ್ ಪಿಯುಸಿ ಕಾಲೇಜಿನ ಆಶಯದಲ್ಲಿ ಅಬ್ಬಕ್ಕರಾಣಿ ಉಪನ್ಯಾಸ, ಸಾಕ್ಷ ಚಿತ್ರ ಪ್ರದರ್ಶನ...

ಬೆಳ್ತಂಗಡಿ: ಪ್ರಸನ್ನ ಕಾಲೇಜು- ಅಭ್ಯಾಸ್ ಪಿಯುಸಿ ಕಾಲೇಜಿನ ಆಶಯದಲ್ಲಿ ಅಬ್ಬಕ್ಕರಾಣಿ ಉಪನ್ಯಾಸ, ಸಾಕ್ಷ ಚಿತ್ರ ಪ್ರದರ್ಶನ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘ ಮಂಗಳೂರು ಇದರ ವತಿಯಿಂದ ದಿನಾಂಕ 15.12.2025ನೇ ಸೋಮವಾರ ಪ್ರಸನ್ನ ಎಜುಕೇಶನ್ ಟ್ರಸ್ಟ್ ಬೆಳ್ತಂಗಡಿ ಹಾಗೂ ಅಭ್ಯಾಸ್ ಪಿಯುಸಿ ಕಾಲೇಜ್ ಕಾಶೀಬೆಟ್ಟು ಬೆಳ್ತoಗಡಿ ಇದರ ಜಂಟಿ ಆಶ್ರಯದಲ್ಲಿ ಅಭ್ಯಾಸ್ ಕಾಲೇಜಿನ ಸಭಾಂಗಣದಲ್ಲಿ ಸಂಜೆ ಗಂಟೆ 4 ರಿಂದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅಭ್ಯಾಸ್ ಪಿಯುಸಿ ಕಾಲೇಜಿನ ಚೇರ್ಮನ್ ಶ್ರೀ ಕಾರ್ತಿಕೇಯ ಎಂ.ಎಸ್ ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸನ್ನ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ಶ್ರೀ ಗುರುಪ್ರಸಾದ್ ವಹಿಸಲಿದ್ದಾರೆ.

ಅಬ್ಬಕ್ಕ ರಾಣಿಯ ಕುರಿತ ವಿಶೇಷ ಉಪನ್ಯಾಸವನ್ನು ಉಪನ್ಯಾಸಕರೂ, ಸಾಹಿತಿಗಳೂ, ಸಂಶೋಧಕರೂ ಹಾಗೂ ಚಲನಚಿತ್ರ ನಿರ್ದೇಶಕರೂ ಆದ ಬಿ.ಎ.ಲೋಕಯ್ಯ ಶಿಶಿಲ ಅವರು ನಡೆಸಿಕೊಡಲಿದ್ದಾರೆ. ಆ ಬಳಿಕ ಸಾಕ್ಷ ಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.