Home News Belthangady: ಹಾಸನ ಗಣಪತಿ ಮೆರವಣಿಗೆ ದುರಂತ: ಬೆಳ್ತಂಗಡಿ ಕೀಲು ಗೊಂಬೆ ತಂಡ ಅವಘಡದಿಂದ ಜಸ್ಟ್‌ ಮಿಸ್‌

Belthangady: ಹಾಸನ ಗಣಪತಿ ಮೆರವಣಿಗೆ ದುರಂತ: ಬೆಳ್ತಂಗಡಿ ಕೀಲು ಗೊಂಬೆ ತಂಡ ಅವಘಡದಿಂದ ಜಸ್ಟ್‌ ಮಿಸ್‌

Hindu neighbor gifts plot of land

Hindu neighbour gifts land to Muslim journalist

Belthangady: ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಟ್ರಕ್‌ವೊಂದು ಹರಿದು ಡಿಜೆಗೆ ಕುಣಿಯುತ್ತಿದ್ದ ಹಲವು ಮಂದಿ ಸಾವಿಗೀಡಾಗಿರುವ ಘಟನೆ ಹಾಸನದ ಮೊಸಳೆಹೊಸಳ್ಳಿಯಲ್ಲಿ ನಡೆದಿತ್ತು. ಈ ಘಟನೆ ನಡೆದಾಗ, ಬೆಳ್ತಂಗಡಿಯ ಕೀಲು ಗೊಂಬೆ ಕುಣಿತದ ತಂಡ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.

ಬೆಳ್ತಂಗಡಿಯ ಗಿರೀಶ್‌ ಶೆಟ್ಟಿ ಮಾಲೀಕತ್ವದ ಶೆಟ್ಟಿ ಆರ್ಟ್ಸ್‌ ಕಲಾ ತಂಡದ 17 ಮಂದಿ ಕಲಾವಿದರು ಈ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಕ್ಷಗಾನ, ಕೀಲು ಕುದುರೆ ಸಹಿತ ವಿವಿಧ ಗೊಂಬೆಗಳ ಜೊತೆ ಮೆರವಣಿಗೆಯಲ್ಲಿ ಎಲ್ಲಾ ಕಲಾವಿದರು ಸಾಗುತ್ತಿದ್ದರು. ಇನ್ನೇನು ಮೆರವಣಿಗೆ ಕೊನೆಯ ಹಂತಕ್ಕೆ ತಲುಪಬೇಕು ಎನ್ನುವಾಗ ಟ್ರಕ್‌ ಬಂದು ಗುದ್ದಿ, ಅವಘಡ ಸಂಭವಿಸಿದೆ ಎಂದು ತಂಡದ ಮುಖ್ಯಸ್ಥಳ ಯಶೋಧರ್‌ ಅವರು ಹೇಳಿರುವ ಕುರಿತು ವರದಿಯಾಗಿದೆ.

ನಾವು ಹೆಚ್ಚು ಅಂತರದಲ್ಲಿ ಸಾಗುತ್ತಿದ್ದೆವು. ಅಷ್ಟರಲ್ಲಿ ಡಿವೈರ್‌ ಏರಿ ಟ್ರಕ್‌ ಮುನ್ನುಗ್ಗಿ ಬಂದಿದದೆ. ನಮ್ಮ ತಂಡದ ಕಲಾವಿದರೊಬ್ಬರು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇದರಿಂದ ನಮ್ಮ ತಂಡದ ಸದಸ್ಯರು ಇನ್ನೂ ಹೊರಬಂದಿಲ್ಲ. ಗಣೇಶೋತ್ಸವ ಸಮಿತಿ ಅಧ್ಯಕ್ಷರು ಇನ್ನೇನು ಡಿಜೆ ವಾಹನದ ಬಳಿ ತೆರಳಲು ಮುಂದಾಗಿದ್ದು, ಅಷ್ಟರಲ್ಲಿ ಈ ಅವಘಡ ನಡೆದಿದೆ.

ಚಾಲಕ ಟ್ರಕ್‌ನಲ್ಲಿಯೇ ಅಮಲಿನಲ್ಲಿ ಸ್ಟೇರಿಂಗ್‌ಗೆ ಬಿದ್ದಿದ್ದ. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪರೀಕ್ಷೆ ಮಾಡಿದಾಗ ಆತ ಅಮಲು ಪದಾರ್ಥ ಸೇವಿಸಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಯಶೋಧರ್‌ ಹೇಳಿರುವ ಕುರಿತು ವರದಿಯಾಗಿದೆ.