Home News Belthangady: ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆಯೇ ಉಪಹಾರ ಖಾಲಿ, ಜನರಿಗೆ ನಿರಾಸೆ

Belthangady: ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆಯೇ ಉಪಹಾರ ಖಾಲಿ, ಜನರಿಗೆ ನಿರಾಸೆ

Indira Canteen

Hindu neighbor gifts plot of land

Hindu neighbour gifts land to Muslim journalist

Belthangady: ಅ.11 (ನಿನ್ನೆ) ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇಂದಿರಾ ಕ್ಯಾಂಟೀನ್‌ನನ್ನು ಬೆಳ್ತಂಗಡಿಯಲ್ಲಿ ಉದ್ಘಾಟಿಸಿದ್ದಾರೆ. ತಾಲೂಕಿನ ಅಂಬೇಡ್ಕರ್‌ ಭವನದ ಬಳಿ ಶನಿವಾರ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್‌ಗೆ ಇಂದು (ಭಾನುವಾರ) ಉಪಹಾರಕ್ಕೆಂದು ಬಂದವರಿಗೆ ಕಂಡೀಷನ್‌, ಸಮಯದ ಅವಧಿ ತಿಳಿಯದೆ ನಿರಾಸೆಯಿಂದ ಹಿಂದಿರುಗಿದ ಘಟನೆ ನಡೆದಿದೆ.

ಬೆಳಿಗ್ಗೆ 7.30 ಗಂಟೆಗೆ ಕ್ಯಾಂಟೀನ್‌ ಪ್ರಾರಂಭಗೊಳ್ಳಲಿದ್ದು, ಕೇವಲ 200 ಕೂಪನ್‌ ಸಿಗಲಿದೆ. ಹಾಗಾಗಿ ಇದು ಬೇಗನೇ ಖಾಲಿಯಾಗಿದೆ. ಅದೇ ರೀತಿ ಮಧ್ಯಾಹ್ನ 200 ರಾತ್ರಿ ಊಟಕ್ಕೆ 200 ಕೂಪನ್‌ ನೀಡಲು ಅವಕಾಶವಿದೆ.

ಭಾನುವಾರ ಬೆಳಿಗ್ಗೆ (ಇಂದು) ಚಾ ತಿಂಡಿ 9 ಗಂಟೆ ಸುಮಾರಿಗೆ ಖಾಲಿಯಾಗಿದೆ. ಇದರ ಕುರಿತು ಮಾಹಿತಿ ಇಲ್ಲದವರು ಉಪಾಹಾರ ಸಿಗದೇ ಹಿಂದಿರುಗಿ ಹೋಗಿದ್ದಾರೆ. ಕೆಲವರು ಇಂದಿರಾ ಕ್ಯಾಂಟೀನ್‌ ಆಹಾರದ ರುಚಿ ನೋಡಬೇಕು ಎಂದು ಬಂದವರಿಗೂ ನಿಯಮಗಳು ತಿಳಿಯದೇ ಇದ್ದುದ್ದರಿಂದ ನಿರಾಸೆಯಿಂದ ವಾಪಾಸು ಹೋಗಿದ್ದಾರೆ.

ಇದನ್ನೂ ಓದಿ:Actor Vijay: ಬಿಗಿ ಭದ್ರತೆ, ಸೀಮಿತ ಮಾಧ್ಯಮದ ಜೊತೆ ಅಕ್ಟೋಬರ್ 17 ರಂದು ಕರೂರು ಸಂತ್ರಸ್ತ ಕುಟುಂಬಗಳನ್ನು ವಿಜಯ್ ಭೇಟಿ

ಮುಂದಿನ ದಿನಗಳಲ್ಲಿ ಕೂಪನ್‌ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್‌ ಸಮಯಾವಧಿ ವಿವರ ಇಲ್ಲಿದೆ:
ಬೆಳಗಿನ ಉಪಾಹಾರ – 7.30AM-10:00 AM
ಮಧ್ಯಾಹ್ನ ಊಟ _12.30PM-3.30 PM
ರಾತ್ರಿಯ ಊಟ -6.30Pm-8.30 PM