Home News Ballari: ಬಾನು ಮುಷ್ತಾಕ್‌ ಆಯ್ಕೆ ವಿವಾದ: ಪ್ರತಾಪ್‌ ಸಿಂಹ ಹೇಳಿಕೆಗೆ ಸಂತೋಷ್‌ ಲಾಡ್‌ ಖಡಕ್‌ ಉತ್ತರ

Ballari: ಬಾನು ಮುಷ್ತಾಕ್‌ ಆಯ್ಕೆ ವಿವಾದ: ಪ್ರತಾಪ್‌ ಸಿಂಹ ಹೇಳಿಕೆಗೆ ಸಂತೋಷ್‌ ಲಾಡ್‌ ಖಡಕ್‌ ಉತ್ತರ

Hindu neighbor gifts plot of land

Hindu neighbour gifts land to Muslim journalist

Ballari: ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಆಯ್ಕೆಯನ್ನು ಬಿಜೆಪಿ ನಾಯಕರು ವಿರೋಧ ಮಾಡಲು ಪ್ರಾರಂಭ ಮಾಡಿದ್ದು, ಇವರ ಹೇಳಿಕೆಗೆ ಇದೀಗ ಸಚಿವ ಸಂತೋಷ್‌ ಲಾಡ್‌ ಪ್ರತಿಕ್ರಿಯೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಬಾರದೆಂದು ಸಂವಿಧಾನದಲ್ಲಿ ಇದೆಯಾ? ಎಲ್ಲದಕ್ಕೂ ವಿರೋಧ ಮಾಡ್ತಾ ಹೋದ್ರೆ ಏನು ಮಾಡೋದು ಎಂದು ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ದಾನ ಮಾಡುವ ದಾನಿ ಯಾರು? ಅಜೀಂ ಪ್ರೇಮ್‌ಜೀ ಫೌಂಡೇಶನ್‌ನಿಂದ ಎರಡೂವರೆ ಲಕ್ಷ ಕೋಟಿ ರೂ. ಹಣ ದಾನ ನೀಡಲಾಗಿದೆ. ಹಾಗಾದರೆ ಈ ದಾನ ನೀಡಿದವರು ಯಾವ ಸಮಾಜದವರು ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು.

ಅಬ್ದುಲ್‌ ಕಲಾಂ ರಾಷ್ಟ್ರಪತಿಯಾಗಿದ್ದರೂ ನಾವು ವಿರೋಧ ಮಾಡಿದ್ವಾ? ಕಲಾಂ ಹಿಂದೂ ವಿರೋಧಿಯಲ್ಲ ಎಂದು ಸಮರ್ಥನೆ ಮಾಡ್ತಾರೆ. ಹಾಗಾದರೆ ಬಾನು ಮುಷ್ತಾಕ್‌ ಹಿಂದೂ ವಿರೋಧಿನಾ ಎಂದು ಬಿಜೆಪಿಯವರನ್ನು ಲಾಡ್‌ ಪ್ರಶ್ನೆ ಮಾಡಿದರು.