Home News Belagavi: ಅಂಗಡಿಯಲ್ಲಿ ಪಾತ್ರೆ ಕೊಳ್ಳಲು ಬಂದವನ ಜೊತೆ ತಾಯಿಯ ಲವ್ವಿಡವ್ವಿ! ಅನೈತಿಕ ಸಂಬಂಧಕ್ಕೆ ಮಗ ಅಡ್ಡಿ,...

Belagavi: ಅಂಗಡಿಯಲ್ಲಿ ಪಾತ್ರೆ ಕೊಳ್ಳಲು ಬಂದವನ ಜೊತೆ ತಾಯಿಯ ಲವ್ವಿಡವ್ವಿ! ಅನೈತಿಕ ಸಂಬಂಧಕ್ಕೆ ಮಗ ಅಡ್ಡಿ, ಅಮ್ಮನಿಂದಲೇ ನಡೆಯಿತು ಕೊಲೆಯ ಮಾಸ್ಟರ್‌ ಪ್ಲ್ಯಾನ್‌! ಏನದು ಗೊತ್ತೇ?

Belagavi

Hindu neighbor gifts plot of land

Hindu neighbour gifts land to Muslim journalist

Belagavi: ತಾಯಿಯೋರ್ವಳು ತನ್ನ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ 22ವರ್ಷದ ಮಗನನ್ನೇ ಕೊಲೆ ಮಾಡಿದ ವಿಚಿತ್ರ ಘಟನೆಯೊಂದು ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ನಡೆದಿದೆ. ಹರಿಪ್ರಸಾದ್‌ ಎಂಬಾತ ಮನೆಯಲ್ಲಿ ಮಲಗಿದ್ದಲ್ಲೇ ಶವವಾಗಿದ್ದ. ಆದರೆ ಹೆತ್ತ ತಂದೆಗೆ ತನ್ನ ಮಗನ ಸಾವು ಅಸಹಜ ಸಾವು ಎಂದು ಅರಿವಿಗೆ ಬಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಸಹಜ ಸಾವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಬಂದಿತ್ತು. ವಿಚಾರಣೆ ನಡೆಸಿದ ಪೊಲೀಸರಿಗೆ ತನಿಖೆ ಮಾಡಿದಾಗ, ಈ ಕೃತ್ಯದ ಹಿಂದೆ ಹೆತ್ತ ತಾಯಿಯ ನೆರಳಿರುವುದು ಕಂಡು ಬಂದಿದೆ.

ಈ ಮೇಲ್ಗಡೆ ಕಾಣುತ್ತಿರುವ ಹುಡುಗನ ಹೆಸರು ಹರಿಪ್ರಸಾದ್‌ ಬೋಸಲ್‌ (22ವರ್ಷ). ಆರೋಪಿ ಈತನ ಅಮ್ಮ ಸುಧಾ ಎಂಬಾಕೆಯೇ ಈ ಕೃತ್ಯದ ಮಾಸ್ಟರ್‌ ಮೈಂಡ್‌. ಸುಧಾ ತನ್ನ ಗಂಡನನ್ನು ಬಿಟ್ಟು ಪಾತ್ರೆ ಅಂಗಡಿಯನ್ನಿಟ್ಟುಕೊಂಡು ಎರಡು ಗಂಡು ಮಕ್ಕಳ ಜೊತೆಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಳು. ಮಗ ತನ್ನ ತಾಯಿ ಹೇಳಿದ ಹಾಗೆ ಕೇಳುತ್ತಿದ್ದ. ಆದರೆ ಇಲ್ಲೇ ನಡೆದದ್ದು ಟ್ವಿಸ್ಟ್‌. ಪಾತ್ರೆ ಕೊಂಡುಕೊಳ್ಳಲು ಬರುತ್ತಿದ್ದ ಬಬಲೇಶ್ವರ್‌ ಜೊತೆ ಈ ಮಹಾತಾಯಿ ತನ್ನ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಇದು ಮಗನಿಗೆ ಗೊತ್ತಾಗಿ ಸಿಟ್ಟುಗೊಂಡ ಆತ ತಾಯಿ ಜೊತೆ ಜಗಳ ಮಾಡಿ, ಸಂಬಂಧಿಕರಿಗೆ ಕರೆ ಮಾಡಿ ತಾಯಿಯ ವಿಷಯ ಹೇಳಿದ್ದ.

ಅನೈತಿಕ ಸಂಬಂಧದ ವಿಚಾರ ಸಂಬಂಧಿಕರಿಗೆ ಗೊತ್ತಾಗಿ ಸುಧಾಳನ್ನು ಕರೆದು ಸಂಬಂಧಿಕರು ಬೈದಿದ್ದು. ಇನ್ನು ಈ ವಿಚಾರ ಬೇರೆಯವರಿಗೆ ಗೊತ್ತಾಗಿ ತನ್ನ ಮಾನ ಮರ್ಯಾದೆ ಹೋಗುತ್ತೆ ಎಂದು ತನ್ನ ಪ್ರಿಯಕರ ಕುಮಾರ್‌ ಬಬಲೇಶ್ವರ ಜೊತೆ ಸೇರಿ ಮೇ.28ರಂದು ಸುಧಾ, ಆಕೆಯ ಚಿಕ್ಕ ಮಗ, ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌರಮ್‌ ಮಾನೆ, ಸೇರಿ ಎಂಟು ಜನ ಸೇರಿ ಹರಿಪ್ರಸಾದ್‌ನನ್ನು ಉಸಿರುಗಟ್ಟಿಸಿ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಎಸ್ಕೇಪ್‌ ಆಗಿದ್ದಾರೆ. ಆದರೆ ತಾಯಿ ಬೆಳಗ್ಗೆ ಏಳುತ್ತಿದ್ದಂತೆ ತನ್ನ ಮಗನಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ ಎಂದು ಬೊಬ್ಬೆ ಹೊಡೆದಿದ್ದಾಳೆ. ಈಕೆಯ ಲವ್ವಿಡವ್ವಿ ಆಟದ ಬಗ್ಗೆ ಗಂಡ ಸಂತೋಷ ಪೊಲೀಸರಿಗೆ ಮೊದಲೇ ಸುಳಿವು ನೀಡಿದ್ದ. ನಂತರ ವಿಚಾರಣೆಯಲ್ಲಿ ಕೊಲೆ ವಿಚಾರ ಬಾಯ್ಬಿಟ್ಟಿದ್ದಾಳೆ. ಪರಾರಿಯಾದವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

 

ಇದನ್ನು ಓದಿ: Costly Tea: ಇದು ವಿಶ್ವದ ಅತ್ಯಂತ ದುಬಾರಿ ಚಹಾ! ಬೆಲೆ ಕೇಳಿದರೆ ತಲೆ ತಿರುಗುವುದು ಖಂಡಿತ!