Home News ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿಯ ಖತರ್ನಾಕ್ ಐಡಿಯಾ! ಉಚ್ಚೆ ಮಾಡೋ ಜಾಗದಲ್ಲಿ ಭಾರತಮಾತೆ ಫೋಟೋ!

ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿಯ ಖತರ್ನಾಕ್ ಐಡಿಯಾ! ಉಚ್ಚೆ ಮಾಡೋ ಜಾಗದಲ್ಲಿ ಭಾರತಮಾತೆ ಫೋಟೋ!

Hindu neighbor gifts plot of land

Hindu neighbour gifts land to Muslim journalist

Bengaluru : ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಾದ್ಯಂತ ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವವರನ್ನು ಮತ್ತು ಕಸ ಎಸೆಯುವುದನ್ನು ನಿಯಂತ್ರಿಸಲು ಮೂತ್ರ ಮಾಡುವ ಮತ್ತು ಕಸ ಎಸೆಯುವ ಸ್ಥಳಗಳಲ್ಲಿ ಭಾರತಮಾತೆಯ ಚಿತ್ರವಿರುವ ಬ್ಯಾನರನ್ನು ನೆಲದಲ್ಲಿಟ್ಟು ಜನರನ್ನು ಎಚ್ಚರಿಸುತ್ತೇವೆಂಬ ಹುಚ್ಚು ಭ್ರಮೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳ ಆಧುನಿಕ ತಲೆಗಳು ಇದೀಗ ಅತ್ಯಾಧುನಿಕ ಐಡಿಯಾ ಒಂದನ್ನು ಆವಿಷ್ಕರಿಸಿ ಕಾರ್ಯರೂಪಕ್ಕಿಳಿಸಿ ಸಾರ್ವಜನಿಕರ ಸನ್ಮಾನ ಹಾಗೂ ಭಾರತ ಸೇರಿದಂತೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಮುಂದಾಗಿದ್ದಾರೆ.

ಹೌದು, ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ಅಲ್ಲಲ್ಲಿ ಮೂತ್ರ ಮಾಡುವವರನ್ನು ಮತ್ತು ಕಸ ಎಸೆಯವರನ್ನು ನಿಯಂತ್ರಿಲು ಬೇರೆ ಯಾವುದೇ ಐಡಿಯಾ ಹೊಳೆಯದಿದ್ದಾಗ ಎಸಿ ರೂಮ್ನೊಳಗೆ ಕುಳಿತ ಬಿಬಿಎಂಪಿ ಅಧಿಕಾರಿಗಳ ಓಲ್ಡ್ ತಲೆಗಳಿಗೆ ಹೊಳೆದದ್ದೇ ಭಾರತಾಂಬೆಯ ಚಿತ್ರವಿರುವ ಬ್ಯಾನರ್ ಗಳನ್ನು ಮೂತ್ರ ಮಾಡುವ ಮತ್ತು ಕಸ ಎಸೆಯುವ ಸ್ಥಳದಲ್ಲಿ, ನೆಲದಲ್ಲಿ ಅಳವಡಿಸುವ ಹೊಚ್ಚಹೊಸ ಗೋಲ್ಡನ್ ಐಡಿಯಾ. ಹೀಗಾಗಿ ತಮ್ಮ ಓಲ್ಡ್ ತಲೆಗಳಿಗೆ ಹೊಡೆದ ಗೋಲ್ಡನ್ ಐಡಿಯಾವನ್ನು ಕಾರ್ಯಗತಗೊಳಿಸಿ ಎಲ್ಲರಿಂದಲೂ ಭೇಷ್ ಅನ್ನಿಸಿ ಎಲ್ಲ ಪ್ರಶಸ್ತಿಗಳನ್ನು ತಾವೇ ಬಾಚಿಕೊಳ್ಳಬೇಕೆಂಬ ಹುಚ್ಚು ಉತ್ಸಾಹಕ್ಕೆ ಬಿದ್ದ ಬಿಬಿಎಂಪಿ ಹಿಂದೆ ಮುಂದೆ ನೋಡದೆ ತಮ್ಮ ಮಾರ್ಷಲ್ ಗಳ ಮೂಲಕ ಮೂತ್ರ ಮಾಡುವ ಹಾಗೂ ಕಸ ಎಸೆಯುವ ಸ್ಥಳಗಳಲ್ಲಿ ಭಾರತಾಂಬೆಯ ಚಿತ್ರ ಇರುವ ಬ್ಯಾನರನ್ನು ನೆಲದಲ್ಲಿಟ್ಟು ತಮ್ಮ ಐಡಿಯಾವನ್ನು ಕಾರ್ಯಗತ ಗೊಳಿಸಿಯ ಬಿಟ್ಟಿತು. ಆದರೆ ಬಿಬಿಎಂಪಿ ತನ್ನ ಈ ಖತರ್ನಾಕ್ ಐಡಿಯಾವನ್ನು ಕಾರ್ಯಗತಗೊಳಿಸಲು ಮುಂದಾಗುತ್ತಿದ್ದಂತೆಯೇ ಎಚ್ಚೆತ್ತ ಸ್ಥಳೀಯರು ಇದನ್ನು ತೀವ್ರವಾಗಿ ವಿರೋಧಿಸಿದಾಗ ಈ ವಿಚಾರ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿ ಬಿಬಿಎಂಪಿಯ ತಲೆ ಬುಡವಿಲ್ಲದ ಈ ಐಡಿಯಾದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೇಳ ತೊಡಗಿತು.

ಜೊತೆಗೆ ಕುಲಗೆಟ್ಟ ಈ ಗ್ಯಾರೆಂಟಿ ಸರಕಾರದಲ್ಲಿ ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಬಿಬಿಎಂಪಿಯಂತಹ ಇಲಾಖೆಗಳೂ ಸಹ ಸರ್ಕಾರದ ಮರ್ಜಿಯನ್ನೇ ಅನುಸರಿಸಲು ಮುಂದಾಗಿ ಮೂತ್ರ ಮಾಡುವ ಮತ್ತು ಕಸ ಎಸೆಯುವ ಸ್ಥಳಗಳಲ್ಲೂ ಭಾರತಮಾತೆಯ ಚಿತ್ರಗಳಿರುವ ಬ್ಯಾನರ್ ಗಳನ್ನು ಅಳವಡಿಸುವ೦ತಹಾ ಖತರ್ನಾಕ್ ಐಡಿಯವನ್ನು ಕಾರ್ಯಗತಗೊಳಿಸಲು ಮುಂದಾಗುವಂತಾಯಿತಲ್ಲ!? ಎನ್ನುವ ಆಕ್ರೋಶದ ಮಾತುಗಳು ಇದೀಗ ರಾಜ್ಯಾದ್ಯಂತ ವ್ಯಕ್ತವಾಗತೊಡಗಿದೆ.

ಇದನ್ನೂ ಓದಿ:Death: ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಸಾಲಗಾರ