Home News Niveditha Gowda: ಬಾತ್ ರೂಮ್ ಆಯ್ತು, ಈಗ ಬೆಡ್‌ರೂಮ್ ಫೋಟೋ ಶೇರ್ ಮಾಡಿದ ನಿವೇದಿತಾ ಗೌಡ!

Niveditha Gowda: ಬಾತ್ ರೂಮ್ ಆಯ್ತು, ಈಗ ಬೆಡ್‌ರೂಮ್ ಫೋಟೋ ಶೇರ್ ಮಾಡಿದ ನಿವೇದಿತಾ ಗೌಡ!

Gicchi Giligili Niveditha Gowda

Hindu neighbor gifts plot of land

Hindu neighbour gifts land to Muslim journalist

Niveditha Gowda: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿ, ನಂತರ ಅದ್ದೂರಿಯಾಗಿ ಮದುವೆಯಾಗಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಗಪ್ ಚುಪ್ ಆಗಿ ಡಿವೋರ್ಸ್ ಆಗಿರೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಡಿವೋರ್ಸ್ ಆದ ನಂತರ ನಿವೇದಿತಾ ಹೆಂಗೆಂಗೋ ರೀಲ್ಸ್ ಮಾಡೋದನ್ನು ನೋಡಿ ಹಲವು ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರೂ ನಿವೇದಿತಾ ಮಾತ್ರ ಕ್ಯಾರೇ ಅನ್ನದೇ ತನ್ನ ಇಷ್ಟದಂತೆ ಬದುಕುತ್ತಿದ್ದಾಳೆ.

ಹೌದು, ಇತ್ತೀಚಿಗೆ ನಿವೇದಿತಾ ಗೌಡ (Niveditha Gowda) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿರುವ ನಟಿ ಕೆಲವು ದಿನಗಳ ಹಿಂದೆ ಬಾತ್ ರೂಮ್ ರೀಲ್ಸ್ ಹರಿಬಿಟ್ಟಿದ್ದರು, ಇದೀಗ ಬೆಡ್‌ರೂಮ್ ಫೋಟೋಶೂಟ್‌ವೊಂದನ್ನು ಶೇರ್ ಮಾಡಿದ್ದಾರೆ.

ಬೆಡ್ ರೂಮ್ ನಲ್ಲಿ ನಿವೇದಿತಾ ಕೇಸರಿ ಬಣ್ಣದ ಲೆಹೆಂಗಾ ಧರಿಸಿರುವ ಕೆಲ ಫೋಟೋಗಳನ್ನು ಶೇರ್ ಮಾಡಿದ್ದು, ಬೆಡ್ ಮೇಲೆ ಕುಳಿತು ಎದೆಯ ಸೀಳು ಕಾಣುವಂತೆ ಬೋಲ್ಡ್ ಆಗಿ ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು, ನಿಮಗೆ ಡಿವೋರ್ಸ್ ಆಗಿದೆ ಅನ್ನೋದು ನೆನಪಿದ್ಯಾ? ಈ ರೀತಿ ಒಬ್ಬರಿಗೆ ಒಬ್ಬರಿಗೆ ನೋವು ಕೊಟ್ಟು ನೀವು ಖುಷಿಯಾಗಿರಲು ಹೇಗೆ ಸಾಧ್ಯ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ಈ ಯಾವ ಕಾಮೆಂಟ್‌ಗಳಿಗೂ ತಲೆಕೆಡಿಸಿಕೊಳ್ಳದೇ ನಟಿ ತನ್ನ ರೀಲ್ಸ್ ನಲ್ಲೆ ಸದಾ ಮುಳುಗಿರುತ್ತಾರೆ.

ಇನ್ನು ನಿವೇದಿತಾ ಚಂದನ್ ಶೆಟ್ಟಿ (Chandan Shetty) ಜೊತೆ ‘ಮುದ್ದು ರಾಕ್ಷಸಿ’ (Muddu Rakshasi) ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ (GST) ಸಿನಿಮಾದಲ್ಲಿ ಕೂಡ ನಿವೇದಿತಾ ನಟಿಸಿದ್ದಾರೆ. ಸದ್ಯ ಡಿವೋರ್ಸ್ ಆದ ನಂತರ ನಿವೇದಿತಾ ಹವಾ ಜೋರಾಗಿಯೇ ಇದೆ ಅಂದ್ರೆ ತಪ್ಪಾಗಲಾರದು.