Home News Basavangouda Yatnal: ‘ವಿಜಯೇಂದ್ರನೇ ದೊಡ್ಡ ಭ್ರಷ್ಟ, ನಿನ್ನ ತನಿಖೆ ನಡೆಸಲು ಮತ್ತೊಂದು ಪಾದಯಾತ್ರೆ ಮಾಡ್ತೇವೆ’...

Basavangouda Yatnal: ‘ವಿಜಯೇಂದ್ರನೇ ದೊಡ್ಡ ಭ್ರಷ್ಟ, ನಿನ್ನ ತನಿಖೆ ನಡೆಸಲು ಮತ್ತೊಂದು ಪಾದಯಾತ್ರೆ ಮಾಡ್ತೇವೆ’ -ಶಾಸಕ ಯತ್ನಾಳ್ ಕಿಡಿ

Hindu neighbor gifts plot of land

Hindu neighbour gifts land to Muslim journalist

Basavanagouda Yatnal: ಮುಡಾ ಹಗರಣದ(Muda Scam) ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ಸಮರ ಸಾರಿದ್ದು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಕೈಗೊಂಡಿವೆ. ಆದರೆ ಕೆಲವು ಬಿಜೆಪಿ ನಾಯಕರು ಪಾದಯಾತ್ರೆಯಿಂದ ಅಂತರ ಕೈಗೊಂಡಿದ್ದಾರೆಹ ಅದರಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basavanagiuda Yatnal) ಕೂಡ ಒಬ್ಬರು.

ಹೌದು, ಬಿಜೆಪಿಯ ಭ್ರಷ್ಟ ನಾಯಕರ ವಿರುದ್ಧ, ಯಡಿಯೂರಪ್ಪರ ಕುಟುಂಬದ ವಿರುದ್ಧ ಸದಾ ಕಿಡಿಕಾರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದು, ವಿಜಯೇಂದ್ರ ಹಾಗೂ ಯಡಿಯೂರಪ್ಪರ(Yadiyurappa) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯೇಂದ್ರನೇ ಮೊದಲು ದೊಡ್ಡ ಭ್ರಷ್ಟ. ಅವನಿಂದಲೇ ಭ್ರಷ್ಟಾಚಾರ ವಿರುದ್ಧ ಪಾದಯಾತ್ರೆ ನಡೆಯೋದು ಎಷ್ಟು ಸರಿ. ವಿಜಯೇಂದ್ರ ಕೊರೊನಾ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಹೊರಗೆ ಬರಲಿ. ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ‌ ಇಲ್ಲ ಎಂದು ಬಿಜೆಪಿ ಪಾದಯಾತ್ರೆಗೆ ಟಾಂಗ್ ನೀಡಿದರು.

ಅಲ್ಲದೆ ಡಿಕೆಶಿ-ವಿಜಯೇಂದ್ರ ನಡುವೆ ಅಡ್ಜೆಸ್ಟ್‌ಮೆಂಟ್‌ ಇದೆ. ಅಡ್ಜೆಸ್ಟ್‌ಮೆಂಟ್‌ ಇದೆ ಅನ್ನೋದು 100% ನಿಜ. ಭೋವಿ, ತಾಂಡಾ ನಿಗಮಗಳ ತನಿಖೆ ಆಗಲಿ. ಭ್ರಷ್ಟ ಕುಟುಂಬವನ್ನ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಡಿ. ಸಿದ್ದರಾಮಯ್ಯ, ಡಿಕೆಶಿಗೆ ಧಮ್, ತಾಕತ್‌ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ ಎಂದು ಸವಾಲೆಸೆದರು.