Home News H Anjaneya : “ಗಣೇಶ ಹಬ್ಬದಲ್ಲಿ ಬಾರ್ ಗಳು ಫುಲ್ ರಶ್‌ ಇರುತ್ತೆ”: ಹೆಚ್.ಆಂಜನೇಯ ಹೇಳಿಕೆ

H Anjaneya : “ಗಣೇಶ ಹಬ್ಬದಲ್ಲಿ ಬಾರ್ ಗಳು ಫುಲ್ ರಶ್‌ ಇರುತ್ತೆ”: ಹೆಚ್.ಆಂಜನೇಯ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

H Anjaneya: ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಹಿಂದೂಗಳ (Hindus) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಏ‌ರ್ ಪೋರ್ಟ್‌ನಲ್ಲಿ ಮುಸ್ಲಿಮರು ನಮಾಜ್ ಮಾಡಿದ ಘಟನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಈ ವಿವಾದಾತ್ಮಕ ಹೇಳಿಕೆ (Controversy) ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮಾಜ್ ಅವರ ಪ್ರಾರ್ಥನೆ. ಮಸೀದಿ ಇಲ್ಲ ಅಂತ ಅಲ್ಲಿ ನಮಾಜ್ ಮಾಡಿರಬಹುದು. ಆದ್ರೆ ಬೇರೆಯವರ ರೀತಿ ಕೋಲು ಹಿಡಿದುಕೊಂಡು ಹೋಗೊದಲ್ಲ. ಹೀಗಾಗಿ ಮುಸಲ್ಮಾನರ ಶ್ರದ್ಧೆಯನ್ನು ನೀವೆಲ್ಲರೂ ಕಲಿತುಕೊಳ್ಳಿ ಎಂದು ಪರೋಕ್ಷವಾಗಿ ಆರ್.ಎಸ್.ಎಸ್ ಬಗ್ಗೆ ಟಾಂಗ್ ನೀಡಿದ್ದಾರೆ.ಈ ವೇಳೆ ಪರೋಕ್ಷವಾಗಿ ಪುರೋಹಿತರ ಬಗ್ಗೆ ಮಾತನಾಡಿದ ಅವರು, ಇವರ ರೀತಿ ಹಣೆಗೆ ನಾಮ ಹಾಕಿಕೊಂಡು, ಪೂಜೆ ಮಾಡಿ ತಟ್ಟೆಗೆ ಕಾಸು ಹಾಕಯ್ಯ ಅಂತ ಮುಸ್ಲಿಮರು ಕೇಳಿಲ್ಲ. ಈ ವಿಚಾರಗಳಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ..? ಎಂದು ಪ್ರಶ್ನಿಸಿದ ಅವರು, ಗಣೇಶನ ಹಬ್ಬದಲ್ಲಿ ಹೂವು ಹಣ್ಣುಗಳ ಅಂಗಡಿಗಳಿಗಿಂತ ಬಾರ್ ಅಂಗಡಿಗಳು ಫುಲ್ ರಶ್ ಇರುತ್ತವೆ ಎಂದು ಹೇಳುವ ಮೂಲಕ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.