Home News Puttur: ಪುತ್ತೂರಿನಲ್ಲಿ ಭಾರೀ ಮಳೆಗೆ ತಡೆಗೋಡೆ ಕುಸಿತ: ತಪ್ಪಿದ ಭಾರೀ ಅನಾಹುತ!

Puttur: ಪುತ್ತೂರಿನಲ್ಲಿ ಭಾರೀ ಮಳೆಗೆ ತಡೆಗೋಡೆ ಕುಸಿತ: ತಪ್ಪಿದ ಭಾರೀ ಅನಾಹುತ!

Hindu neighbor gifts plot of land

Hindu neighbour gifts land to Muslim journalist

Puttur: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಆರ್ಭಟಕ್ಕೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಮನೆಯೊಂದರ ಬೃಹತ್ ತಡೆಗೋಡೆ ಕುಸಿದು ಬಿದ್ದ ಘಟನೆ ವರದಿಯಾಗಿದೆ.

ಪುತ್ತೂರಿನ (Puttur) ರಕೇಶ್ವರಿ ವಠಾರದ ಲಿಂಗದಗುಡ್ಡೆ ಎಂಬಲ್ಲಿ ಶಶಿಕಾಂತ್ ರಾವ್‌ ಎಂಬುವವರಿಗೆ ಸೇರಿದ ಮನೆಯ ತಡೆಗೋಡೆ ಇದಾಗಿದ್ದು. ಅದೃಷ್ಟವಶಾತ್ ಘಟನೆ ಸಂಭವಿಸಿದ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ.

ಶಶಿಕಾಂತ್ ರಾವ್ ಅವರ ಮನೆಯ ಹಿಂಭಾಗದಲ್ಲಿದ್ದ ಈ ತಡೆಗೋಡೆ ಶುಕ್ರವಾರ ಭಾರೀ ಶಬ್ದದೊಂದಿಗೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿತದಿಂದಾಗಿ ಸಮೀಪದಲ್ಲಿದ್ದ ಮೂರು ಮನೆಗಳು ಇದೀಗ ಅಪಾಯದ ಸ್ಥಿತಿಯಲ್ಲಿವೆ. ಈ ಮನೆಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದು, ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.