Home News C M Siddaramaiah: ದಸರಾ ಉದ್ಘಾಟನೆ ವಿವಾದ: ಕೋರ್ಟ್‌ನಲ್ಲೇ ಪ್ರತಾಪ್‌ಗೆ ಉತ್ತರ ನೀಡುತ್ತೇವೆ: ಸಿಎಂ

C M Siddaramaiah: ದಸರಾ ಉದ್ಘಾಟನೆ ವಿವಾದ: ಕೋರ್ಟ್‌ನಲ್ಲೇ ಪ್ರತಾಪ್‌ಗೆ ಉತ್ತರ ನೀಡುತ್ತೇವೆ: ಸಿಎಂ

MUDA Scam case

Hindu neighbor gifts plot of land

Hindu neighbour gifts land to Muslim journalist

C M Siddaramaiah: ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವುದನ್ನು ಖಂಡಿಸಿ ಮಾಜಿ ಸಂಸದ ಪ್ರತಾಪಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಎಂ ಕೂಡಾ ರಾಜಕೀಯ ಹಾಗೂ ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಶನಿವಾರ ಆಲಮಟ್ಟಿಯಲ್ಲಿ ಸುದ್ದಿಗಾರರ ಜೊತೆ ಹೇಳಿದ್ದಾರೆ.

ಮುಷ್ತಾಕ್‌ ಆಯ್ಕೆ ವಿಷಯ ಕೋರ್ಟ್‌ಗೆ ಹೋಗಿದ್ದು ಬಹಳ ಸಂತೋಷವಾಗಿದ್ದು, ಇದು ಅಲ್ಲೇ ಇತ್ಯರ್ಥವಾಗಲಿ. ಈ ಹಿಂದೆ ಪ್ರತಾಪ ಸಿಂಹ ಸಂಸದರಾಗಿದ್ದಾಗಲೇ ಸಾಹಿತಿ ನಿಸಾರ್‌ ಅಹ್ಮದ್‌ ದಸರಾ ಉದ್ಘಾಟಿಸಿದಾಗ ಯಾಕೆ ಕೋರ್ಟ್‌ಗೆ ಹೋಗಲಿಲ್ಲ? ಹೈದರ್‌ ಆಲಿ, ಟಿಪ್ಪು ಸುಲ್ತಾನ್‌ ದಸರಾ ಆಚರಣೆ ಮಾಡಿದಾಗ ಯಾಕೆ ವಿರೋಧಿಸಲಿಲ್ಲ? ಮಿರ್ಜಾ ಇಸ್ಮಾಯಿಲ್‌ ಮೆರವಣಿಗೆಯಲ್ಲಿ ತೆರಳಿದಾಗ ಯಾಕೆ ವಿರೋಧ ಮಾಡಿಲ್ಲ? ಈಗ ಬಾನು ಮುಷ್ತಾಕ್‌ ವಿಷಯದಲ್ಲಿ ರಾಜಕೀಯ ದುರುದ್ದೇಶದಿಂದ ವಿರೋಧ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:Pavagadh Ropeway Accident: ಪಾವಗಢ: ರೋಪ್‌ವೇ ತಂತಿ ತುಂಡಾಗಿ 6 ​​ಮಂದಿ ಸಾವು

ಕನ್ನಡಾಂಬೆ ಕುರಿತು ಹೀಗೆಳೆದು ಮಾತನಾಡಿರುವುದಕ್ಕೆ ಯಾವುದೇ ಪುರಾವೆಯಿಲ್ಲ. ಬಾನು ಮುಷ್ತಾಕ್‌ ಕನ್ನಡದ ಸಾಹಿತಿಯಾಗಿರುವ ಕಾರಣ ಅವರಿಂದ ದಸರಾ ಉದ್ಘಾಟನೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.