Home News Bantwala: ಬಂಟ್ವಾಳ;ಮಗನ ಸಾಲ ಬಾಕಿಗೆ ಗೃಹಲಕ್ಷ್ಮೀ ಹಣವನ್ನು ಕೊಡದೆ ಸತಾಯಿಸಿದ ಬ್ಯಾಂಕ್‌ ಮ್ಯಾನೇಜರ್!

Bantwala: ಬಂಟ್ವಾಳ;ಮಗನ ಸಾಲ ಬಾಕಿಗೆ ಗೃಹಲಕ್ಷ್ಮೀ ಹಣವನ್ನು ಕೊಡದೆ ಸತಾಯಿಸಿದ ಬ್ಯಾಂಕ್‌ ಮ್ಯಾನೇಜರ್!

Hindu neighbor gifts plot of land

Hindu neighbour gifts land to Muslim journalist

Bantwala: ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮೀ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಸತಾಯಿಸಿದ ಸಾಲೆತ್ತೂರಿನ ರಾಷ್ಟ್ರೀಕೃತ ಬ್ಯಾಂಕ್‌ ಮ್ಯಾನೇಜರ್‌ ವಿಚಾರ ಕೊಳ್ನಾಡು ಗ್ರಾಮ ಸಭೆಯಲ್ಲಿ ಮಾತುಕತೆಗೆ ಕಾರಣವಾಗಿದೆ.

ಕೊಳ್ನಾಡು ಗ್ರಾಮಸಭೆ ಆರಂಭವಾದಾಗ ರಾಷ್ಟ್ರೀಕೃತ ಬ್ಯಾಂಕ್‌ ಸಾಲೆತ್ತೂರು ಶಾಖೆಯ ಮ್ಯಾನೇಜರ್‌ ಬ್ಯಾಂಕ್‌ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದ್ದಾಗ, ನಂತರ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ನೀಡಿದರು.

ಆಗ ಈ ಸಭೆಯಲ್ಲಿ ಹಾಜರಿದ್ದ ನೆಬಿಸ ಈ ವಿಚಾರವನ್ನು ಗ್ರಾಮಸ್ಥರ ಮೂಲಕ ಸಭೆಯಲ್ಲಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಹಾರಿಕೆಯ ಉತ್ತರ ನೀಡುತ್ತಿದ್ದ ಬ್ಯಾಂಕ್‌ ಅಧಿಕಾರಿ ನೊಂದ ಮಹಿಳೆ ಎದ್ದು ನಿಂತು ಕಣ್ಣೀರಿಟ್ಟು ಹೇಳಿದಾಗ, ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. ಅನಂತರ ಗ್ರಾಮಸ್ಥರು ಅರ್ಧಗಂಟೆ ಕಾಲ ಬ್ಯಾಂಕ್‌ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ವಿಧಿಯಿಲ್ಲದೇ ತನ್ನ ತಪ್ಪನ್ನು ಒಪ್ಪಿಕೊಂಡ ಮ್ಯಾನೇಜರ್‌ ಸಭೆಯಿಂದ ಹೊರನಡೆದು ಮಹಿಳೆಯನ್ನು ಬ್ಯಾಂಕಿಗೆ ಬರಲು ಹೇಳಿ ಆ ಮಹಿಳೆಯ ಖಾತೆಯಲ್ಲಿ ಇದ್ದ 8,500 ರೂ. ನಗದು ಗೃಹಲಕ್ಷ್ಮಿ ಹಣವನ್ನು ನೀಡಿದ್ದಾರೆ.

ನಂತರ ನೆಬಿಸ ಅವರು ಗ್ರಾಮಸಭೆಗೆ ವಾಪಸ್‌ ಬಂದು ಅಭಿನಂದನೆ ಸಲ್ಲಿಸಿದ್ದಾರೆ.