

Holidays: ಸೆಪ್ಟೆಂಬರ್-2025ರಲ್ಲಿ, ಕರ್ಮ ಪೂಜೆ, ಓಣಂ, ಮಹಾಸಪ್ತಮಿ, ಮಹಾಷ್ಟಮಿ ಮತ್ತು ಈದ್-ಎ-ಮಿಲಾದ್/ಮಿಲಾದ್-ಉನ್-ನಬಿ ಮುಂತಾದ ಹಬ್ಬಗಳು ಮತ್ತು ಭಾನುವಾರ-ಶನಿವಾರ ರಜಾದಿನಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು 15 ದಿನಗಳ ಕಾಲ ರಜೆ ಇದೆ.
ಸೆಪ್ಟೆಂಬರ್ ತಿಂಗಳ 3, 4, 5, 6, 12, 22, 23, 29 ಮತ್ತು 30ರಂದು ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರ 7, 13, 14, 21, 27 2 28 ರಂದು ರಜಾದಿನಗಳಾಗಿರುತ್ತವೆ. ಹೀಗಾಗಿ ಬ್ಯಾಂಕ್ ಗ್ರಾಹಕರಿಗೆ ಇದರಿಂದ ಒಂದಷ್ಟು ತೊಂದರೆಯಾಗಲಿದೆ.
ಇನ್ನು, ಸೆಪ್ಟೆಂಬರ್ ತಿಂಗಳ 31 ದಿನಗಳಲ್ಲಿ ಬರೋಬ್ಬರಿ 8 ದಿನಗಳ ಕಾಲ ಕರ್ನಾಟಕದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹಾಗಾಗಿ ಈ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಬ್ಯಾಂಕ್‌ಗಳಿಗೆ ರಜೆ ಇದ್ದರೂ ಕೂಡ ATM ಹಾಗೂ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹೀಗಾಗಿ ಗ್ರಾಹಕರಿಗೆ ಈ ವ್ವಸ್ಥೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ.













