Home Jobs ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ|ನಾಳೆಯೇ...

ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ|ನಾಳೆಯೇ ನಡೆಯಲಿದೆ ಸಂದರ್ಶನ

Hindu neighbor gifts plot of land

Hindu neighbour gifts land to Muslim journalist

ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವವರಿಗೆ ಸಿಹಿ ಸುದ್ದಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು : ಡಯಾಲಿಸಿಸ್ ಟೆಕ್ನಿಷಿಯನ್,ಹಾಸ್ಪಿಟಲ್ ಅಟೆಂಡೆಂಟ್

ಒಟ್ಟು ಹುದ್ದೆಗಳು : 22

ಉದ್ಯೋಗದ ಸ್ಥಳ : ಬೆಂಗಳೂರು

ವೇತನ ಮಾಸಿಕ : ₹ 12,500-1,20,000

ಸಂದರ್ಶನ ನಡೆಯುವ ದಿನಾಂಕ : 28/02/2022

ಹುದ್ದೆಯ ಮಾಹಿತಿ:

ನೆಫ್ರೋಲಾಜಿಸ್ಟ್​-1
ಆನ್​ ಡ್ಯೂಟಿ ಮೆಡಿಕಲ್ ಆಫೀಸರ್-2
ಮ್ಯಾನೇಜರ್-1
ಡಯಾಲಿಸಿಸ್ ಟೆಕ್ನಿಷಿಯನ್-10
ಡಯೆಟಿಶಿಯನ್-2
ಹಾಸ್ಪಿಟಲ್ ಅಟೆಂಡೆಂಟ್-6

ವಿದ್ಯಾರ್ಹತೆ:
ನೆಫ್ರೋಲಾಜಿಸ್ಟ್​-ಎಂಬಿಬಿಎಸ್​, ಎಂಡಿ
ಆನ್​ ಡ್ಯೂಟಿ ಮೆಡಿಕಲ್ ಆಫೀಸರ್-ಎಂಬಿಬಿಎಸ್
ಮ್ಯಾನೇಜರ್-ಬಿಬಿಎಂ, ಎಂಬಿಎ
ಡಯಾಲಿಸಿಸ್ ಟೆಕ್ನಿಷಿಯನ್-ಪಿಯುಸಿ
ಡಯೆಟಿಶಿಯನ್-ಎಂಎಸ್ಸಿ
ಹಾಸ್ಪಿಟಲ್ ಅಟೆಂಡೆಂಟ್-10ನೇ ತರಗತಿ

ಅನುಭವ:

ನೆಫ್ರೋಲಾಜಿಸ್ಟ್​-ಡಯಾಲಿಸಿಸ್​ ಸೆಂಟರ್​ನಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ
ಆನ್​ ಡ್ಯೂಟಿ ಮೆಡಿಕಲ್ ಆಫೀಸರ್-ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಮತ್ತು ಮೆಡಿಕಲ್ ಕೌನ್ಸಿಲ್​ನಲ್ಲಿ ನೋಂದಣಿಯಾಗಿರಬೇಕು
ಮ್ಯಾನೇಜರ್-ಸಂಬಂಧಿತ ಕ್ಷೇತ್ರದಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ
ಡಯಾಲಿಸಿಸ್ ಟೆಕ್ನಿಷಿಯನ್-ಸಂಬಂಧಿತ ಕ್ಷೇತ್ರದಲ್ಲಿ 3-4 ವರ್ಷ ಕೆಲಸ ಮಾಡಿದ ಅನುಭವ
ಡಯೆಟಿಶಿಯನ್-ಸಂಬಂಧಿತ ಕ್ಷೇತ್ರದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ

ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಫೆಬ್ರವರಿ 28, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ಇರಬೇಕು.

ವೇತನ:
ನೆಫ್ರೋಲಾಜಿಸ್ಟ್​-ಮಾಸಿಕ ₹ 1,20,000
ಆನ್​ ಡ್ಯೂಟಿ ಮೆಡಿಕಲ್ ಆಫೀಸರ್-ಮಾಸಿಕ ₹ 45,000
ಮ್ಯಾನೇಜರ್-ಮಾಸಿಕ ₹ 30,000
ಡಯಾಲಿಸಿಸ್ ಟೆಕ್ನಿಷಿಯನ್-ಮಾಸಿಕ ₹ 20,000-30,000
ಡಯೆಟಿಶಿಯನ್-ಮಾಸಿಕ ₹ 30,000
ಹಾಸ್ಪಿಟಲ್ ಅಟೆಂಡೆಂಟ್-ಮಾಸಿಕ ₹ 12,500

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ವೈದ್ಯಾಧಿಕಾರಿಗಳ ಕಚೇರಿ
ರಾಜರಾಜೇಶ್ವರಿ ನಗರ ವಲಯ
ಐಡಿಯಲ್ ಹೋಮ್ಸ್​ ಬಡಾವಣೆ
ರಾಜರಾಜೇಶ್ವರಿ ನಗರ
ಬೆಂಗಳೂರು-560098

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ bbmp.gov.in ಗೆ ಭೇಟಿ ನೀಡಬಹುದು. ಇದೇ ಫೆಬ್ರವರಿ 28ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.