Home News ಯುವತಿಯ ಮೊಬೈಲ್ ಪೋನ್ ಕರೆಗಳ ವಿವರ ಸಂಗ್ರಹಿಸಿ ಖಾಸಗಿ ವ್ಯಕ್ತಿಗೆ ನೀಡಿದ ಪೊಲೀಸರ ಅಮಾನತು

ಯುವತಿಯ ಮೊಬೈಲ್ ಪೋನ್ ಕರೆಗಳ ವಿವರ ಸಂಗ್ರಹಿಸಿ ಖಾಸಗಿ ವ್ಯಕ್ತಿಗೆ ನೀಡಿದ ಪೊಲೀಸರ ಅಮಾನತು

Hindu neighbor gifts plot of land

Hindu neighbour gifts land to Muslim journalist

Bangalore Crime : ಬೆಂಗಳೂರು : ಯುವತಿಯೋರ್ವಳ ಮೊಬೈಲ್ ಫೋನ್ ಕರೆಗಳ ವಿವರಗಳನ್ನು ಸಂಗ್ರಹಿಸಿ ಖಾಸಗಿ ವ್ಯಕ್ತಿಗೆ ನೀಡಿದ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಿದ ಬಗ್ಗೆ ವರದಿಯಾಗಿದೆ.

ಈ ಪ್ರಕರಣದ ಕುರಿತಂತೆ ಯುವತಿಯು ಪೊಲೀಸರಿಗೆ ( Bangalore Crime) ನೀಡಿದ್ದ ದೂರಿನಂತೆ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಮೂವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದರು.

ಈ ವರದಿ ಆಧರಿಸಿ ಪೊಲೀಸ್ ಇಲಾಖೆಯ ಮೂವರು ನೌಕರರನ್ನು ಅಮಾನತುಗೊಳಿಸಿ, ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಕೇಂದ್ರ ವಿಭಾಗದ ಸೂಪರಿಂಟೆಂಡೆಂಟ್ ಸುರೇಶ್, ಪೂರ್ವ ವಿಭಾಗದ ತಾಂತ್ರಿಕ ಘಟಕದ ಹೆಡ್ ಕಾನ್‌ಸ್ಟೆಬಲ್ ಸೋಮಶೇಖರ್ ಹಾಗೂ ಕಾನ್‌ಸ್ಟೆಬಲ್ ನಾಗರಾಜ್ ಎಂಬವರೇ ಅಮಾನತುಗೊಂಡವರು.