Home News Kerala: ಕೇರಳದ ರೈಲು ಚಾಲಕರಿಗೆ ಸಾಫ್ಟ್‌ ಡ್ರಿಂಕ್ಸ್‌ ಸೇವನೆ ನಿಷೇಧ

Kerala: ಕೇರಳದ ರೈಲು ಚಾಲಕರಿಗೆ ಸಾಫ್ಟ್‌ ಡ್ರಿಂಕ್ಸ್‌ ಸೇವನೆ ನಿಷೇಧ

Hindu neighbor gifts plot of land

Hindu neighbour gifts land to Muslim journalist

Tiruvananthapuram: ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ಲೋಕೋ ಪೈಲಟ್‌ಗಳು ಎಳನೀರು, ಕೆಲ ಪಾನೀಯ ಹಾಗೂ ಹಣ್ಣುಗಳು, ಕೆಮ್ಮಿನ ಸಿರಪ್‌, ಹೋಮಿಯೋಪತಿ ಔಷಧಿ ಸೇವಿಸುವುದನ್ನು ಹಾಗೂ ಮೌತ್‌ವಾಷ್‌ ಬಳಸುವುದನ್ನು ನಿಷೇಧ ಮಾಡಲಾಗಿದೆ. ಏಕೆಂದರೆ, ಇವುಗಳಿಂದ ಅವರ ಉಸಿರಾಟದ ಪರೀಕ್ಷೆ ಮಾಡಿದಾಗ ಯಂತ್ರ ದೋಷದಿಂದ ಅದರಲ್ಲಿ ಮದ್ಯದ ಅಂಶ ಇದೆ ಎಂಬ ಫಲಿತಾಂಶ ಬರುತ್ತಿದ್ದು, ಇದರಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದೆ.

ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ʼಒಂದೊಮ್ಮೆ ಅವುಗಳ ಸೇವನೆ ಅನಿವಾರ್ಯ ಎಂದಾದಲ್ಲಿ ಮೊದಲೇ ಸಾಕ್ಷಿ ಮೂಲಕ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.