Home News Dr G Parameshwar : ರಸ್ತೆಯಲ್ಲಿ ನಮಾಜ್ ಮಾಡುವುದಿನ್ನು ನಿಷೇಧ? ಗೃಹ ಸಚಿವ ಪರಮೇಶ್ವರ್ ಮಹತ್ವದ...

Dr G Parameshwar : ರಸ್ತೆಯಲ್ಲಿ ನಮಾಜ್ ಮಾಡುವುದಿನ್ನು ನಿಷೇಧ? ಗೃಹ ಸಚಿವ ಪರಮೇಶ್ವರ್ ಮಹತ್ವದ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Dr D Parameshwar : ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡುವ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ್ಯ ಸರ್ಕಾರ ಈ ಕುರಿತಾಗಿ ಹೊಸ ಮಸೂದೆಯನ್ನು ಕೂಡ ಮಂಡಿಸಲು ಮುಂದಾಗಿದೆ. ಇದರ ನಡುವೆ ಅನೇಕ ಬಿಜೆಪಿ ನಾಯಕರು ಮುಸಲ್ಮಾನರು ರಸ್ತೆಯಲ್ಲಿ ನಮಾಜ್ ಮಾಡಲು ಕುಳಿತುಕೊಳ್ಳುತ್ತಾರೆ. ಹೀಗೆ ನಡು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ಸರ್ಕಾರ ನಿಷೇಧಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಡಾ. ಪರಮೇಶ್ವರ್ ಅವರ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ರಸ್ತೆಯಲ್ಲಿ ನಮಾಜ್‌ ಮಾಡುವುದನ್ನ ರದ್ದು ಮಾಡುವ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ (G. Parameshwara) ಹೇಳಿದ್ದಾರೆ. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನ ಮಾಡಬಾರದು ಎಂದು ಆದೇಶ ನೀಡಿದೆ. ಹೀಗಾಗಿ ಮುಸಲ್ಮಾನರು ನಡುರಸ್ತೆಯಲ್ಲಿ ನಮಾಜ್ ಮಾಡುವುದನ್ನು ರದ್ದು ಮಾಡಿದ ಕುರಿತು ಸದ್ಯದಲ್ಲೇ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ ಜಗದೀಶ್‌ಶೆಟ್ಟರ್‌ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರದೇ ಪಕ್ಷದ ಅಂಗ ಸಂಸ್ಥೆಯಾದ ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳಿಗೆ ನಿಯಂತ್ರಣ ಹಾಕಿದ್ದರು. ಕಾಂಗ್ರೆಸ್‌‍ ಸರ್ಕಾರ ಆದೇಶ ಹೊರಡಸಿದ್ದರೆ, ಗಲಾಟೆ ಮಾಡುತ್ತಾರೆ. ಜಗದೀಶ್‌ ಶೆಟ್ಟರ್‌ ಆದೇಶವನ್ನು ಕಂಡೂ ಕಾಣದಂತಿರುತ್ತಾರೆ. ಅನಗತ್ಯ ಪ್ರಚೋದನೆ ಬೇಡ ಎಂದು ನಾವು ಸುಮನಿದ್ದೇವೆ ಎಂದರು.