Home News Belagavi: ಬಕ್ರೀದ್ ಸಂಭ್ರಮ – ಎರಡು ಮೇಕೆಗಳು ₹5.10 ಲಕ್ಷಕ್ಕೆ ಮಾರಾಟ !!

Belagavi: ಬಕ್ರೀದ್ ಸಂಭ್ರಮ – ಎರಡು ಮೇಕೆಗಳು ₹5.10 ಲಕ್ಷಕ್ಕೆ ಮಾರಾಟ !!

Hindu neighbor gifts plot of land

Hindu neighbour gifts land to Muslim journalist

Belagavi: ಮುಸ್ಲಿಮರ ಪ್ರಮುಖ ಧಾರ್ಮಿಕರ ಹಬ್ಬವಾಗಿರುವ ಬಕ್ರೀದ್ ಎಲ್ಲಡೆ ಸಂಭ್ರಮವನ್ನು ಮನ ಮಾಡಿದೆ. ಜೊತೆಗೆ ಕುರಿ-ಮೇಕೆ ಮಾರಾಟವೂ ಕೂಡ ಭರ್ಜರಿಯಾಗಿ ನಡೆದಿದೆ. ಆಶ್ಚರ್ಯಕರ ಸಂಗತಿ ಎಂದರೆ ಬಕ್ರೀದ್ ಹಬ್ಬದ ಪ್ರಯುಕ್ತ ಬೆಳಗಾವಿಯಲ್ಲಿ ರೈತರು ಒಬ್ಬರ ಸಾಕಿದ ಎರಡು ಮೇಕೆಗಳು 5. 10 ರೂ ಗೆ ಮಾರಾಟವಾಗಿದೆ.

ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಇಟ್ನಾಳ ಗ್ರಾಮದ ರೈತ ದಂಪತಿ ಶಿವಪ್ಪ ಶೆಂಡೂರೆ ಮತ್ತು ಶಾಂತಾ ಶೆಂಡೂರೆ ಸಾಕಿದ ಎರಡು ಬೀಟಲ್ ತಳಿಯ ಮೇಕೆಗಳು ₹5.10 ಲಕ್ಷಕ್ಕೆ ಮಾರಾಟವಾಗಿವೆ. ಒಂದು ಮೇಕೆ ₹3 ಲಕ್ಷಕ್ಕೆ ಮತ್ತು ಇನ್ನೊಂದು ₹2.10 ಲಕ್ಷಕ್ಕೆ ಮರತವಾಗಿವೆ. ವಿಜಯಪುರದ ವ್ಯಾಪಾರಿಗಳಾದ ಮೋಜಿಮ್ ಮತ್ತು ಆಸಿಫ್‌ ಈ ಮೇಕೆಗಳನ್ನು ಕೊಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಕ್ರೀದ್‌ಗೆ 15 ದಿನಗಳ ಹಿಂದೆಯೇ ವಿಜಯಪುರದ ವ್ಯಾಪಾರಿಗಳು ಈ ಎರಡು ಮೇಕೆಗಳಿಗೆ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದರು. ಪೂರ್ಣ ಹಣವನ್ನು ಪಾವತಿಸಿ ಖರೀದಿಯನ್ನು ಪೂರ್ಣಗೊಳಿಸಿದರು. ಮಾರಾಟದ ವೇಳೆ ಮೇಕೆಗಳಿಗೆ ಗುಲಾಲು ಎರಚಿ, ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಗೌರವಯುತವಾಗಿ ಬೀಳ್ಕೊಡಲಾಯಿತು. ಈ ಎರಡೂ ಮೇಕೆಗಳು 2.5 ವರ್ಷ ವಯಸ್ಸಿನವು, ತಲಾ ಎರಡು ಕ್ವಿಂಟಲ್ ತೂಕ ಮತ್ತು 4 ಅಡಿ ಎತ್ತರವನ್ನು ಹೊಂದಿವೆ.

ಅಂದಹಾಗೆ ಪಂಜಾಬ್ ಮೂಲದ ಬೀಟಲ್ ತಳಿಯ ಮೇಕೆಗಳು ದೊಡ್ಡ ದೇಹ, ಉದ್ದನೆಯ ಕಿವಿಗಳು ಮತ್ತು ಸಣ್ಣ ಮುಖವನ್ನು ಹೊಂದಿವೆ. ಇವುಗಳನ್ನು ಮಾಂಸಕ್ಕಾಗಿ ಸಾಕಲಾಗುತ್ತದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೇಕೆಗಳಿಗೆ, ವಿಶೇಷವಾಗಿ ಬೀಟಲ್ ತಳಿಯ ಮೇಕೆಗಳಿಗೆ, ಭಾರೀ ಬೇಡಿಕೆ ಇರುತ್ತದೆ. ಈ ತಳಿಯ ಮೇಕೆಗಳು ತಮ್ಮ ದೊಡ್ಡ ಗಾತ್ರ ಮತ್ತು ಉತ್ತಮ ಗುಣಮಟ್ಟದ ಮಾಂಸಕ್ಕೆ ಹೆಸರಾಗಿವೆ