Home latest ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಮತ್ತೊಂದು ಪ್ರತ್ಯೇಕ ಶಿಕ್ಷೆ!

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಮತ್ತೊಂದು ಪ್ರತ್ಯೇಕ ಶಿಕ್ಷೆ!

Hindu neighbor gifts plot of land

Hindu neighbour gifts land to Muslim journalist

ಬಜರಂಗದಳ ಕಾರ್ಯಕರ್ತ ಹರ್ಷನನ್ನು ಭೀಕರವಾಗಿ ಹತ್ಯೆಗೈದ ಆರೋಪಿಗಳ ವಿರುದ್ಧ ಜೈಲಿನೊಳಗೆ ಮೊಬೈಲ್ ಬಳಸಿದ್ದಕ್ಕಾಗಿ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.
ಜೈಲಿನೊಳಗೆ ಮೊಬೈಲ್ ಬಳಸಿರುವ ಆರೋಪಿಗಳು ಈ ಪ್ರಕರಣದ ವಿಚಾರಣೆ ನಡೆಸಿ, ಪ್ರತ್ಯೇಕ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಹೌದು, ಕೇಂದ್ರ ಕಾರಾಗೃಹದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೂವರು ಆರೋಪಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಮಾತನಾಡಿರುವ ವೀಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ( ಡಿಜಿಪಿ) ಅಲೋಕ್ ಮೋಹನ್, ಜೈಲಿನ ಚೀಫ್ ಸೂಪರಿಂಟೆಂಡೆಂಟ್ ರಂಗನಾಥ್ ಸೇರಿದಂತೆ 6 ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ತನಿಖೆಗೂ ಆದೇಶಿಸಿದ್ದರು.
ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸೇರಿದಂತೆ ಅನೇಕ ಆರೋಪಿಗಳು ತಮ್ಮ ಬ್ಯಾರಕ್‌ಗಳಲ್ಲಿ ಮೊಬೈಲ್ ಬಳಸಿದ್ದಾರೆಂಬುದು ವಿಚಾರಣೆಯಲ್ಲಿ ಸಾಬೀತಾಗಿದೆ. “ಈ ಆರೋಪಕ್ಕಾಗಿ ಮೂಲ ಪ್ರಕರಣದ ಶಿಕ್ಷೆಯನ್ನು ಹೊರತುಪಡಿಸಿ ಪ್ರತ್ಯೇಕ ಐದು ವರ್ಷಗಳ ಶಿಕ್ಷೆಗೆ ಆರೋಪಿಗಳು ಗುರಿಯಾಗಬಹುದು” ಎಂದು ಅಲೋಕ್ ಮೋಹನ್ ಹೇಳಿದರು.

ಅಷ್ಟು ಮಾತ್ರವಲ್ಲದೇ, ಎರಡು ದಿನಗಳ ಹಿಂದಷ್ಟೇ ನೂತನ ಸೂಪರಿಂಟೆಂಡೆಂಟ್ ಪಿ.ಎಸ್.ರಮೇಶ್ ನೇತೃತ್ವದಲ್ಲಿ ಜೈಲಿನಲ್ಲಿರುವ 9೦೦ ವಿಚಾರಣಾ ಕೈದಿಗಳು ಮತ್ತು 33೦ ಹೈಸೆಕ್ಯುರಿಟಿ ವಲಯದ ಕೈದಿಗಳ ತಪಾಸಣೆ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ಕೈದಿಗಳ ಬಳಿ 8೦,೦೦೦ ರೂಪಾಯಿಗೂ ಹೆಚ್ಚು ನಗದು, ಮೆಮೊರಿ ಕಾರ್ಡ್ಸ್, ಸಿಮ್ ಕಾರ್ಡ್ಸ್, ಪೆನ್ ಡ್ರೈವ್ಸ್, ಅಲ್ಯೂಮಿನಿಯಂ ಬಳಸಿ ತಯಾರಿಸಿರುವ ನಾಲ್ಕು ಚಾಕುಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹರ್ಷ ಹತ್ಯೆ ಪ್ರಕರಣದ ಮೂವರು ಸೇರಿದಂತೆ 9 ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕರ್ನಾಟಕ ಕಾರಾಗೃಹ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.