

ಶಿವಮೊಗ್ಗ : ಬರ್ಬರ ಹತ್ಯೆಯಾದ ಮಗನ ಸಾವಿನ ನೋವಿನ ಮಧ್ಯೆ ಹರ್ಷನ ತಾಯಿ ತನ್ನ ಮಗನ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಮಗನ ಸಾವಿಗೆ ನ್ಯಾಯ ಕೋರಿ ತಾಯಿ ಪದ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಸ್ಲಿಂ ಹುಡುಗರಿಗೆ ನನ್ನ ಮಗನನ್ನು ಕಂಡರೆ ಆಗ್ತಾ ಇರಲಿಲ್ಲ. ಆಲಿಫ್ ಮತ್ತು ಪಠಾಣ್ ಸಹಚರರಿಂದ ಬೆದರಿಕೆ ಇತ್ತು. ಕೊಲೆ ಮಾಡುತ್ತೇವೆ ಎಂದು ಆಗಾಗ ಹೇಳ್ತಾನೆ ಇದ್ದರು. ಆಗ ನಾನು ನನ್ನ ಮಗನಿಗೆ ಹೇಳಿದ್ದೆ, ಯಾರ ತಂಟೆಗೂ ಹೋಗಬೇಡ ಎಂದು. ಅವನೂ ನನಗೆ ಹೇಳಿದ್ದ ನನ್ನ ಪಾಡಿಗೆ ನಾನು ಇರ್ತೇನೆ ಯಾರ ಸುದ್ದಿಗೂ ಹೋಗಲ್ಲ ಎಂದು. ನನಗೆ ಮಾತು ಕೂಡಾ ಕೊಟ್ಟಿದ್ದ ಎಂದು ತಾಯಿ ಹೇಳಿದ್ದಾರೆ. ಇನ್ನು ಹರ್ಷ ಅವರ ತಾಯಿಯ ದೂರಿನ ಆಧಾರದ ಮೇಲೆ ಎಫ್ ಐಆರ್ ಕೂಡಾ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕೂಡ ಮೂವರನ್ನು ಅರೆಸ್ಟ್ ಮಾಡಿದ್ದಾರೆ.













