Home News ಬೈಂದೂರು: ಖರೀದಿಸಿದಾಗ ಕೋಳಿ ಮರಿಯೊಂದರ ಬೆಲೆ 10 – ಸಾಗಿಸುವಾಗ ಅಲ್ಲಿ ಹರಿದಿತ್ತು 52!!

ಬೈಂದೂರು: ಖರೀದಿಸಿದಾಗ ಕೋಳಿ ಮರಿಯೊಂದರ ಬೆಲೆ 10 – ಸಾಗಿಸುವಾಗ ಅಲ್ಲಿ ಹರಿದಿತ್ತು 52!!

Hindu neighbor gifts plot of land

Hindu neighbour gifts land to Muslim journalist

ಬೈಂದೂರು:10 ರೂಪಾಯಿ ಬೆಲೆಯ ಪುಟ್ಟ ಕೋಳಿಮರಿಯೊಂದನ್ನು ಖರೀದಿಸಿದ ಆ ಕುಟುಂಬವೊಂದು, ಅದನ್ನು ಸಾಗಿಸಲು 52 ರೂಪಾಯಿಯ ಟಿಕೆಟ್ ಪಡೆದುಕೊಂಡ ಘಟನೆಯೊಂದು ನಡೆದಿದೆ.ತಾವು ಖರೀದಿಸಿದ ಕೋಳಿ ಮರಿಯನ್ನು ಚೀಲದಲ್ಲಿ ತುಂಬಿಸಿಕೊಂಡು ಬಸ್ಸು ಹತ್ತಿದ್ದೇ ತಡ, ನಿರ್ವಾಹಕ ಕೋಳಿ ಮರಿಗೂ ಟಿಕೆಟ್ ಹರಿದೇ ಬಿಟ್ಟಿದ್ದ.

ಹೌದು. ಮೊನ್ನೆಯ ದಿನ ಶಿರಸಿಯಿಂದ ಬಂದು ಬೈಂದೂರಿನ ಶಿರೂರಿಗೆ ಹೊರಟಿದ್ದ ಆ ಕುಟುಂಬ ಸರ್ಕಾರಿ ಬಸ್ಸು ಹತ್ತಿ ಮೂರು ಜನರ ಟಿಕೆಟ್ ಪಡೆದುಕೊಳ್ಳುತ್ತಿತ್ತು.ಈ ವೇಳೆ ಚೀಲದೊಳಗಿಂದ ಕೋಳಿ ಮರಿಯೊಂದು ಶಬ್ದ ಮಾಡುತ್ತಿರುವುದು ನಿರ್ವಾಹಕನ ಗಮನಕ್ಕೆ ಬಂದಿದೆ. ಕೂಡಲೇ ಆತ ಅದಕ್ಕೂ ಟಿಕೆಟ್ ಮಾಡಬೇಕು, ಈಗಿನ ರೂಲ್ಸ್ ಅದು ಎಂದು ಅರ್ಧ ಟಿಕೆಟ್ ಹರಿದೇ ಬಿಟ್ಟ.ಬೇರೆ ವಿಧಿ ಇಲ್ಲದೇ ಕುಟುಂಬ ಸಣ್ಣ ಕೋಳಿ ಮರಿಗೂ 52 ರೂಪಾಯಿಯ ಅರ್ಧ ಟಿಕೆಟ್ ಪಡೆದುಕೊಂಡಿದೆ.

ಇತ್ತ ಕೋಳಿ 10 ರೂಪಾಯಿಯ ಬೆಲೆಯ ಕೋಳಿ ಮರಿಯನ್ನು ಸಾಗಿಸಲು 52 ರೂಪಾಯಿ ತೆತ್ತ ಆ ಕುಟುಂಬ ಸದಸ್ಯರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಈ ಘಟನೆಯ ಬಗ್ಗೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಕುತೂಹಲದಿಂದ ಚರ್ಚಿಸುತ್ತಿದ್ದರು.