Home News Bagalakote: ಎಲ್ಲ ವಿಷಯದಲ್ಲೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗೆ ಧೈರ್ಯ ತುಂಬಲು ಕೇಕ್‌ ಕತ್ತರಿಸಿ ಸಂಭ್ರಮಿಸಿದ ಹೆತ್ತವರು!

Bagalakote: ಎಲ್ಲ ವಿಷಯದಲ್ಲೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗೆ ಧೈರ್ಯ ತುಂಬಲು ಕೇಕ್‌ ಕತ್ತರಿಸಿ ಸಂಭ್ರಮಿಸಿದ ಹೆತ್ತವರು!

SSLC

Hindu neighbor gifts plot of land

Hindu neighbour gifts land to Muslim journalist

Bagalakote: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಆರೂ ವಿಷಯಗಳಲ್ಲಿ ಅನುತೀರ್ಣನಾದ ವಿದ್ಯಾರ್ಥಿಯೊಬ್ಬನಿಗೆ ಆತನ ಮನೆಯವರು ಆತನ ಆತ್ಮಬಲ ಕುಗ್ಗದಿರಲೆಂದು ಕೇಕ್‌ ಕತ್ತರಿಸಿ ಸಂಭ್ರಮಿಸಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ನವನಗರದ ನಿವಾಸಿ ಯಲ್ಲಪ್ಪ ಚೊಳಚಗುಡ್ಡ ಅವರ ಪುತ್ರ ಅಭಿಷೇಕ್‌ ಇಂಗ್ಲಿಷ್‌ ಮೀಡಿಯಂನಲ್ಲಿ ಓದಿ 625ರಲ್ಲಿ 200 ಅಂಕ ಗಳಿಸಿದ್ದ. ಇದರಿಂದ ಬಹಳ ಬೇಸರಗೊಂಡಿದ್ದ ವಿದ್ಯಾರ್ಥಿಗೆ, ಆತ ಆರೂ ವಿಷಯಗಳ ಅಂಕಗಳನ್ನು ಬರೆಸಿ ಕೇಕ್‌ ಕತ್ತರಿಸಿ ಮಗನಿಗೆ ತಿನ್ನಿಸಿ ಧೈರ್ಯ ತುಂಬಿದ್ದಾರೆ.

15 ತಿಂಗಳ ಮಗುವಾಗಿದ್ದಾಗ ಅಭಿಷೇಕ್‌ನ ಎರಡೂ ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿದ್ದ ಕಾರಣ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ ಎಂದು ಮನೆಮಂದಿ ಹೇಳಿರುವ ಕುರಿತು ವರದಿಯಾಗಿದೆ.