Home News Backlash to Wakf Board: ವಕ್ಫ್ ಮಂಡಳಿಯ ದಾವೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಶಾಹಿ ಈದ್ಗಾ...

Backlash to Wakf Board: ವಕ್ಫ್ ಮಂಡಳಿಯ ದಾವೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಶಾಹಿ ಈದ್ಗಾ ಪಾರ್ಕ್‌ನಲ್ಲಿ ಝಾನ್ಸಿರಾಣಿ ಪ್ರತಿಮೆ ಸ್ಥಾಪಿಸಲು ಆದೇಶ

Hindu neighbor gifts plot of land

Hindu neighbour gifts land to Muslim journalist

Backlash to Wakf Board: ಶಾಹಿ ಈದ್ಗಾ ಪಾರ್ಕ್‌ನಲ್ಲಿ ಝಾನ್ಸಿಯ ಮಹಾರಾಣಿಯ ಪ್ರತಿಮೆಯನ್ನು ಸ್ಥಾಪಿಸಲು ಹೈ ಕೋರ್ಟ್ ಆದೇಶಿಸಿದೆ. ಇದೀಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. DDA ಮತ್ತು MCDಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಾಣಿ ಲಕ್ಷ್ಮಿ ಬಾಯಿ ಅವರ ಪ್ರತಿಮೆ ಸ್ಥಾಪನೆಗೆ ಚಾಲನೆ ನೀಡಿದ್ದಾರೆ.

ವಿವಾದಿತ ಜಾಗವೊಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಸೇರಿದೆ. ಅದು ಮಸೀದಿಗೆ ಸೇರಿದ್ದಲ್ಲ ಎಂದು ತೀರ್ಪು ನೀಡಿದ್ದ ಏಕಸದಸ್ಯ ಪೀಠದ ವಿರುದ್ಧವೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಹಿ ಈದ್ಗಾ ವ್ಯವಸ್ಥಾಪಕ ಸಮಿತಿ ಕ್ಷಮೆಯಾಚಿಸಬೇಕು ಎಂದು ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ. ಶಾಹಿ ಈದ್ಗಾ ಉದ್ಯಾನದಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪಿಸಲು ಡಿಡಿಎಗೆ ಏಕ ಸದಸ್ಯ ಪೀಠ ಅನುಮತಿ ನೀಡಿತ್ತು. ಈ ತೀರ್ಪಿನ ಸಮಂಜಸತೆ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಕೆಲ ಸಾಲುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನ್ಯಾಯಾಲಯವು ಉದ್ಯಾನವನದ 13000 ಚದರ ಮೀಟರ್ ಸ್ಥಳವನ್ನು DDA ಯ ಆಸ್ತಿ ಎಂದು ಘೋಷಿಸುತ್ತದೆ. “DDAಯಿಂದ ನಿರ್ವಹಣೆ ಮಾಡಲಾಗುತ್ತದೆ ಮತ್ತು ಈ ನಿರ್ವಹಣೆಯನ್ನು ವಿರೋಧಿಸಲು ವಕ್ಫ್‌ಗೆ ಯಾವುದೇ ಕಾನೂನು ಅಥವಾ ಮೂಲಭೂತ ಹಕ್ಕು ಇಲ್ಲ” ಎಂದು ಮಾನ್ಯ ದೆಹಲಿ ಹೈಕೋರ್ಟ್ ಹೇಳಿದೆ.