Home News ಧರ್ಮಸ್ಥಳ BJP ಧರ್ಮಯಾತ್ರೆ ಹಿನ್ನೆಲೆ: ಸೆಂಟ್ರಲ್ ರಿಸರ್ವ್ ಫೋರ್ಸ್ ಎಂಟ್ರಿ, ಪಥ ಸಂಚಲನ

ಧರ್ಮಸ್ಥಳ BJP ಧರ್ಮಯಾತ್ರೆ ಹಿನ್ನೆಲೆ: ಸೆಂಟ್ರಲ್ ರಿಸರ್ವ್ ಫೋರ್ಸ್ ಎಂಟ್ರಿ, ಪಥ ಸಂಚಲನ

Hindu neighbor gifts plot of land

Hindu neighbour gifts land to Muslim journalist

ಧರ್ಮಸ್ಥಳ: ಇವತ್ತು ಜೆಡಿಎಸ್ ಧರ್ಮಯಾತ್ರೆ ಹೊರಟಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಿಂದ ಯಾತ್ರೆ ಧರ್ಮಸ್ಥಳದ ಕಡೆ ಸಾಗುತ್ತಿದೆ.

ನಾಳೆ ಧರ್ಮಸ್ಥಳಕ್ಕೆ ಬಿಜೆಪಿಯ ಧರ್ಮಯಾತ್ರೆ ಹೊರಡಲಿದೆ. ರಾಜ್ಯದ ಹಲವಾರು ಬಿಜೆಪಿ ನಾಯಕರುಗಳ ದಂಡೇ ಧರ್ಮಸ್ಥಳಕ್ಕೆ ಆಗಮಿಸಲಿದ್ದು ಧರ್ಮಸ್ಥಳದ ಪರವಾಗಿ ದನಿ ಎತ್ತಲಿದ್ದಾರೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಮತ್ತು ಸುತ್ತಮುತ್ತ ಭಾರೀ ಪ್ರಮಾಣದ ಭದ್ರತಾ ಕ್ರಮಗಳು ನಡೆಯುತ್ತಿವೆ. ಒಂದು ಕಡೆ ನೇತ್ರಾವತಿ ಸ್ನಾನ ಘಟ್ಟದ ಸ್ಥಳದಿಂದ ಧರ್ಮಸ್ಥಳ ಪೇಟೆಯ ತನಕ ರಸ್ತೆ ಅಕ್ಕ ಪಕ್ಕ ಕೇಸರಿ ಧ್ವಜವನ್ನು ನೆಡಲಾಗುತ್ತಿದೆ.

ಈಗಾಗಲೇ CRP ತುಕಡಿ ಧರ್ಮಸ್ಥಳಕ್ಕೆ ಆಡಿ ಇಟ್ಟಿದೆ. ಸೆಂಟ್ರಲ್ ರಿಸರ್ವ್ ಫೋರ್ಸ್ ನ ಪೊಲೀಸರು ಕೈಯಲ್ಲಿ ಮೆಷಿನ್ ಗನ್ ಹಿಡಿದು ನಿಂತಿದ್ದಾರೆ. ಇವತ್ತು ಸೆಂಟ್ರಲ್ ರಿಸರ್ವ್ ಫೋರ್ಸ್ ಧರ್ಮಸ್ಥಳದ ಸುತ್ತಮುತ್ತ ಪಥ ಸಂಚಲನ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.