Home News ಗುಡಿಸಲಲ್ಲಿ ಮಲಗಿದ್ದ ಐದು ವರ್ಷದ ಬಾಲಕಿಗೆ ಕಡಿದ ಹಾವು !! | ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ...

ಗುಡಿಸಲಲ್ಲಿ ಮಲಗಿದ್ದ ಐದು ವರ್ಷದ ಬಾಲಕಿಗೆ ಕಡಿದ ಹಾವು !! | ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಸಾವು

Hindu neighbor gifts plot of land

Hindu neighbour gifts land to Muslim journalist

ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.

ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಡಿದಿದೆ. ಹಾವು ಕಡಿದಿರುವ ವಿಷಯ ಪಾಲಕರಿಗೆ ಬೆಳಿಗ್ಗೆ 4 ಗಂಟೆಗೆ ಗೊತ್ತಾಗಿದ್ದು, ತಕ್ಷಣ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ಪುತ್ರಿಯನ್ನು ಕಳೆದುಕೊಂಡ ಅಲೆಮಾರಿ ಪಾಲಕರು ತೀವ್ರ ದುಖಿಃತರಾಗಿದ್ದಾರೆ. ಗುಡಿಸಲಿಗೆ ಬಾಲಕಿಯ ಶವವನ್ನು ತಗೆದುಕೊಂಡು ಬಂದಿರುವ ಅಲಮಾರಿಗಳ ದುಖಃದ ಕಟ್ಟೆ ಒಡೆದಿದೆ.

ಇದೇ ರೀತಿಯ ಅಲೆಮಾರಿಗಳ ಗುಡಿಸಲಲ್ಲಿ ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿ ಬುಡುಗಜಂಗಮ ಗುಡಿಸಲುವಾಸಿಗಳಿಗೆ ಮನೆ ನಿರ್ಮಿಸಬೇಕು. ಮೃತಪಟ್ಟಿರುವ ಬಾಲಕಿಯ ಕುಟುಂಬದವರಿಗೆ ಸೂಕ್ತಪರಿಹಾರ ಕೊಡಬೇಕೆಂದು ಊರವರು ಆಗ್ರಹಿಸಿದ್ದಾರೆ.