Home News B Y Vijayendra: ಪ್ರತಾಪ್ ಸಿಂಹಗೆ MP ಟಿಕೆಟ್ ತಪ್ಪಿಸಿದ್ಯಾರು ?! ಕೊನೆಗೂ ಸತ್ಯ ಬಾಯಿಬಿಟ್ಟ...

B Y Vijayendra: ಪ್ರತಾಪ್ ಸಿಂಹಗೆ MP ಟಿಕೆಟ್ ತಪ್ಪಿಸಿದ್ಯಾರು ?! ಕೊನೆಗೂ ಸತ್ಯ ಬಾಯಿಬಿಟ್ಟ ವಿಜಯೇಂದ್ರ !!

B Y Vijayendra

Hindu neighbor gifts plot of land

Hindu neighbour gifts land to Muslim journalist

B Y Vijayendra: ಕೊಡಗು-ಮೈಸೂರು (Kodagu-Mysore) ಕ್ಷೇತ್ರದಿಂದ 2 ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪ್ರತಾಪ್ ಸಿಂಹ(Pratap Simha) ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕ ಪ್ರತಾಪ್ ಸಿಂಹಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು. ಅಲ್ಲದೆ ಟಿಕೆಟ್ ತಪ್ಪಿದ್ಯಾಕೆ, ತಪ್ಪಿಸಿದ್ಯಾರು ಎಂಬುದೇ ಯಕ್ಷ ಪ್ರಶ್ನೆ ಆಗಿತ್ತು. ಇದೀಗ ಈ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(B Y vijayendra) ಅವರೇ ಸತ್ಯ ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ: Mansoon Rain: ಮೇ 31ರಂದು ರಾಜ್ಯ ಪ್ರವೇಶಿಸಲಿದೆ ಮುಂಗಾರು – ಹವಾಮಾನ ಇಲಾಖೆ ಮಾಹಿತಿ !!

ಪ್ರತಾಪ್ ಸಿಂಹಗೆ ಲೋಕಸಭಾ ಚುನಾವಣೆಯಲ್ಲಿ(Parliament Election )ಟಿಕೆಟ್ ತಪ್ಪಿದಾಗ ಹಲವರು ವಿಜಯೇಂದ್ರ ಅವರೇ ಇದಕ್ಕೆ ಕಾರಣ, ಪ್ರತಾಪ್ ಸಿಂಹ ಭವಿಷ್ಯದ ನಾಯಕ ಆಗುವ ಕಾರಣಕ್ಕೆ ಯಡಿಯೂರಪ್ಪನ ಮಕ್ಕಳು ಹೀಗೆ ಮಾಡಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದರು. ಆದರೀಗ ಈ ಬಗ್ಗೆ ವಿಜಯೇಂದ್ರ ಕೊನೆಗೂ ಮೌನ ಮುರಿದಿದ್ದಾರೆ.

ಹೌದು, ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ವಿಜಯೇಂದ್ರ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾರಿಗೆ ಯಾವಾಗ ಉತ್ತರ ಕೊಡಬೇಕು, ಎಲ್ಲಿ ಕೊಡಬೇಕು ಅಲ್ಲಿ ಕೊಡ್ತೇನೆ. ನಾನು ರಾಜ್ಯಾಧ್ಯಕ್ಷನಾದರೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರದೇ ಅಂತಿಮ. ಅವರೇ ಆಯ್ಕೆ ಮಾಡೋದು.ಟಿಕೆಟ್ ಆಯ್ಕೆ ವಿಚಾರದಲ್ಲಿ ನಾನಿಲ್ಲ. ಈ ವಿಚಾರದಲ್ಲಿ ಹಲವರು ಏನೇನೋ ಮಾತನಾಡಿದ್ರು ಎಂದು ಹೇಳಿದ್ದಾರೆ.

ಟಿಕೆಟ್ ತಪ್ಪಿದಾಗ ಪ್ರತಾಪ್ ಸಿಂಹ ಏನಂದಿದ್ರು?
ಟಿಕೆಟ್ ಮಿಸ್ ಆದರೂ ಬೇಸರ, ಆಕ್ರೋಶವನ್ನು ಹೊರ ಹಾಕದೆ ಮೋದಿಯವರೇ ನನಗೆ ಎರಡು ಅವಧಿಗೆ ಎಂಪಿ ಮಾಡಿದ್ದಾರೆ, ಪತ್ರಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಸಾಯೋವರೆಗೂ ಮೋದಿ ಮೋದಿ ಎನ್ನುತ್ತಲೇ ಬದುಕುತ್ತೇನೆ. ಯಾರು ಏನೇ ಕೊಡುತ್ತೀನಿ ಎಂದರೂ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲಾ ಎಂದು ಸ್ವಾಮಿ ನಿಷ್ಠೆ ತೋರಿಸಿದ್ದರು.

ಇದನ್ನೂ ಓದಿ: Knowledge Story: ತಪ್ಪಿಯೂ ಬಲ ಕೈಗೆ ವಾಚ್ ಕಟ್ಟದಿರಿ! ಹಾಗಿದ್ರೆ ಎಡಗೈಗೆ​ ಏಕೆ ವಾಚ್ ಕಟ್ಟಬೇಕು ಅಂತಾ ನೀವು ತಿಳಿದುಕೊಳ್ಳಲೇ ಬೇಕು!