Home News B Khata to A Khata: B ಖಾತಾದಿಂದ A ಖಾತಾ: ಯಾವ ಖಾತಾ ಪರಿವರ್ತನೆಗೆ...

B Khata to A Khata: B ಖಾತಾದಿಂದ A ಖಾತಾ: ಯಾವ ಖಾತಾ ಪರಿವರ್ತನೆಗೆ ಎಷ್ಟು ಶುಲ್ಕ ?

Hindu neighbor gifts plot of land

Hindu neighbour gifts land to Muslim journalist

B Khata to A Khata: ಕರ್ನಾಟಕದಲ್ಲಿ ಬಿ – ಖಾತಾ ಆಸ್ತಿದಾರರು ಆಸ್ತಿ ಇದ್ದರೂ ಅದಕ್ಕೆ ನಿಖರವಾದ ಮಾರುಕಟ್ಟೆ ಮೌಲ್ಯ ಸಿಗದೆ ಪರದಾಡುವಂತಾಗಿತ್ತು. ಅಲ್ಲದೇ ಬಿ ಖಾತಾ ಆಸ್ತಿದಾರರು ಆಸ್ತಿ ಜಾಗದಲ್ಲಿ ಕಟ್ಟಡಗಳ ನಿರ್ಮಾಣ ಹಾಗೂ ಮಾರಾಟದಂತಹ ಕೆಲಸಗಳಿಗೂ ಭಾರೀ ತೊಡಕಾಗಿತ್ತು.

ಇದೀಗ ಬಿ ಖಾತಾ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ. ಹಾಗಾದರೆ ಬಿ – ಖಾತಾದಿಂದ ಎ – ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ (B Khata to A Khata) ಯಾವುದಕ್ಕೆ ಎಷ್ಟು ನಿಗದಿ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ಸಬ್-ರಿಜಿಸ್ಟಾ‌ರ್ ಮಾರ್ಗಸೂಚಿ ದರ (ಪ್ರತಿ ಚದರ ಅಡಿಗೆ) | ನಿವೇಶನದ ಅಳತೆ | ನಿವೇಶನದ ಬೆಲೆ | ಬಿ ಖಾತಾ ಇಂದ ಎ ಖಾತಾ ಪರಿವರ್ತನೆ ಶುಲ್ಕ (ಮಾರ್ಗಸೂಚಿ ಬೆಲೆಯ 5%)
5,000 30×40 = 1200 60 ಲಕ್ಷ 3 ಲಕ್ಷ
10,000 30×40 = 1200 1.2 ಕೋಟಿ 6 ಲಕ್ಷ
15,000 30×40 = 1200 1.8 ಕೋಟಿ 9 ಲಕ್ಷ
20,000 30×40 = 1200 2.4 ಕೋಟಿ 2 ಲಕ್ಷ

ಇನ್ನು ಈ ದರ ಕೇವಲ 2000 ಚ.ಮೀ. ಗಳ ವರೆಗೆ ಮಾತ್ರ ಅನ್ವಯವಾಗಲಿದೆ . ಈ ದರ 100 ದಿನಗಳಿಗೆ ಮಾತ್ರ ಅನ್ವಯ. ಮುಂದೆ ಪರಿಷ್ಕರಣೆ ಮಾಡಲಾಗುವುದು. ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಪ್ರತ್ಯೇಕ ಇರಲಿದೆ ಎಂದು ಹೇಳಲಾಗಿದೆ. ಇನ್ನು ಬಿ – ಖಾತಾದಿಂದ ಎ- ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಯಾವುದೇ ಗಡುವು ನಿಗದಿ ಮಾಡಿಲ್ಲ.

ಆದರೆ ಬಿ ಖಾತಾದಿಂದ ಎ – ಖಾತಾ ಗುಡ್‌ನ್ಯೂಸ್ ಎಂದು ಹೇಳಿರುವ ಸರ್ಕಾರವು, ದರಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.