Home News ಹೀಗೂ ಮಾಡ್ತಾರಾ ? 50,000 ರೂ ಸಾಲ ತೀರಿಸದ ಆಟೋ ಚಾಲಕನ ಹೆಂಡತಿಯ ರೇಪ್‌ |...

ಹೀಗೂ ಮಾಡ್ತಾರಾ ? 50,000 ರೂ ಸಾಲ ತೀರಿಸದ ಆಟೋ ಚಾಲಕನ ಹೆಂಡತಿಯ ರೇಪ್‌ | ಪೈನಾನ್ಶಿಯರ್ ನಿಂದ ಘೋರ ಕೃತ್ಯ ಜೊತೆಗೆ ಹಲ್ಲೆ

Hindu neighbor gifts plot of land

Hindu neighbour gifts land to Muslim journalist

ಮನುಷ್ಯ ಕೆಲವೊಮ್ಮೆ ತುಂಬಾ ಅಂದರೆ ತುಂಬಾ ಸ್ವಾರ್ಥಿ ಆಗುತ್ತಾನೆ. ಸಣ್ಣ ಸಣ್ಣ ವಿಷಯಗಳಿಗೂ ಕೋಪ, ಮತ್ಸರ, ಕಿತ್ತಾಟ ಇವುಗಳನ್ನು ನೋಡಿ ನೋಡಿ ಸುಸ್ತಾಗಿದೆ. ಹಾಗೆಯೇ ಸಾಲ ಮರುಪಾವತಿ ಮಾಡದ ಆಟೋ ರಿಕ್ಷಾ ಚಾಲಕನ ಪತ್ನಿಯ ಮೇಲೆ ಫೈನಾನ್ಷಿಯರ್ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಅತ್ಯಾಚಾರ ಸಂತ್ರಸ್ತೆಯ ಪ್ರಕಾರ ಆಕೆಯ ಪತಿ ಆಟೋ ರಿಕ್ಷಾ ಓಡಿಸುತ್ತಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಅಜಿತ್ ಸಿಂಗ್ ಚಾವ್ಡಾ ಎಂಬ ಖಾಸಗಿ ಫೈನಾನ್ಷಿಯರ್‌ನಿಂದ 50,000 ರೂಪಾಯಿ ಸಾಲ ಪಡೆದಿದ್ದರು. ಆಕೆಯ ಪತಿ ಬಡ್ಡಿಯನ್ನು ಪಾವತಿಸಲು ವಿಫಲವಾದಾಗ, ಚಾವ್ಡಾ ಅವರ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಗುಜರಾತ್ ನ ರಾಜ್ ಕೋಟ್ ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ಸಂತ್ರಸ್ತೆ ತನ್ನೊಂದಿಗೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದು, ‘ತನ್ನ ಪತಿ ಆಟೋ ರಿಕ್ಷಾ ಓಡಿಸುತ್ತಾನೆ. ಅವರು ಈ ವರ್ಷದ ಫೆಬ್ರವರಿಯಲ್ಲಿ ಅಜಿತ್ ಸಿಂಗ್ ಚಾವ್ಡಾ ಎಂಬ ಖಾಸಗಿ ಫೈನಾನ್ಷಿಯರ್ ಮತ್ತು ಅವರ ವ್ಯಾಪಾರ ಪಾಲುದಾರರಿಂದ 50,000 ರೂ ಸಾಲವನ್ನು ಪಡೆದಿದ್ದರು. ಸಾಲವನ್ನು ಸಕಾಲಕ್ಕೆ ಮರುಪಾವತಿಸಲು ಸಾಧ್ಯವಾಗದಿದ್ದಾಗ ಚಾವಡಾ ಅವರು ದಿನಕ್ಕೆ 1,500 ರೂ.ಗಳನ್ನು ಬಡ್ಡಿಗೆ ನೀಡುವಂತೆ ಕೇಳಿದರು.

ತನ್ನ ಪತಿ ಬಡ್ಡಿಯನ್ನು ಪಾವತಿಸಲು ವಿಫಲವಾದಾಗ, ಚಾವ್ಡಾ ಅವರು ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಅದರ ಸಂಪೂರ್ಣ ವಿಡಿಯೋವನ್ನು ಸಹ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂತ್ರಸ್ತೆಯ ಪ್ರಕಾರ, ಚಾವ್ಡಾ ಅದೇ ತಿಂಗಳಲ್ಲಿ ಅವಳನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು, ಅವಳ ಹಣೆಯ ಮೇಲೆ ಸಿಂಧೂರವನ್ನು ಲೇಪಿಸಿ ತನ್ನ ಹೆಂಡತಿ ಎಂದು ಘೋಷಿಸಿದ್ದರು. ಇದಾದ ಬಳಿಕ ಆರೋಪಿಗಳು ಸಂತ್ರಸ್ತೆಯ ಮನೆಗೆ ಹಲವು ಬಾರಿ ಬಂದು ಅತ್ಯಾಚಾರ ಎಸಗಿದ್ದಾರೆ ಎಂದೂ ಆರೋಪಿಸಲಾಗಿದೆ.

ಸಂತ್ರಸ್ತೆಯ ಪ್ರಕಾರ, ರಾಜ್‌ಕೋಟ್ ತಾಲೂಕು ಪೊಲೀಸರು ಈ ಪ್ರಕರಣದಲ್ಲಿ ತನ್ನ ದೂರನ್ನು ದಾಖಲಿಸಲು ನಿರಾಕರಿಸಿದರು, ನಂತರ ಅವರು ನ್ಯಾಯಾಲಯವನ್ನು ಸಂಪರ್ಕಿಸಿದರು. ಇದಾದ ಬಳಿಕ ಅತ್ಯಾಚಾರದ ದೂರು ದಾಖಲಿಸಲು ಪೊಲೀಸರಿಗೆ ಸೂಚಿಸಲಾಯಿತು ಎನ್ನಲಾಗಿದೆ.

ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳುವುದರ ಜೊತೆಗೆ ಆರೋಪಿ ಫೈನಾನ್ಷಿಯರ್ ಚಾವ್ಡಾಗೆ ಕೂಡ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂತ್ರಸ್ತೆಯ ಪ್ರಕಾರ, ಈ ಮಾಹಿತಿ ಪಡೆದ ತಕ್ಷಣ, ಚಾವ್ಡಾ ತನ್ನ ಇಬ್ಬರು ಸಹಚರರೊಂದಿಗೆ ಶುಕ್ರವಾರ ಸಂಜೆ ತನ್ನ ಪತಿ ಬಳಿ ತಲುಪಿದ್ದಾನೆ, ಆತ ಸಿಗುತ್ತಿದ್ದಂತೆಯೇ ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ದಾಳಿಯಲ್ಲಿ ಚಾವ್ಡಾ ಕೈಗೂ ಗಾಯವಾಗಿದೆ ಎಂದು ಸಂತ್ರಸ್ತೆ ತನಗೆ ಆದ ಅನ್ಯಾಯವನ್ನು ಕೋರ್ಟಿನಲ್ಲಿ ತಿಳಿಸಿದ್ದಾಳೆ.

ಕೆಲವೊಮ್ಮೆ ನಮಗೆ ರಕ್ಷಣೆ ನೀಡಬೇಕಾದವರೇ ಯಾವುದೋ ಆಮಿಷಕ್ಕಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಪರಾಧಕ್ಕೆ ಪ್ರೇರಣೆ ನೀಡುವುದು ಸಮಾಜದಲ್ಲಿ ಮತ್ತೆ ಮತ್ತೇ ಸಾಬೀತು ಆಗುತ್ತಿದೆ.