Home News Pro Kabaddi League 2024: ಪ್ರೊ ಕಬಡ್ಡಿ ಆಟಗಾರರ ಹರಾಜು ಬಿಸಿ ಏರಿದೆ: ವಿಶೇಷ ರಿಪೋರ್ಟ್...

Pro Kabaddi League 2024: ಪ್ರೊ ಕಬಡ್ಡಿ ಆಟಗಾರರ ಹರಾಜು ಬಿಸಿ ಏರಿದೆ: ವಿಶೇಷ ರಿಪೋರ್ಟ್ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

Pro Kabaddi League 2024:  ಪ್ರೊ ಕಬಡ್ಡಿ ಲೀಗ್ (Pro Kabaddi League 2024) ಆಟಗಾರರ ಹರಾಜು ಇಂದು ಹಾಗೂ ನಾಳೆ ನಡೆಯಲಿದ್ದು, ಹಲವು ಬಲಿಷ್ಠ ಆಟಗಾರರ ಮೇಲೆ ಹರಾಜು ಬಿಸಿ ಏರಿದೆ.

ಹೌದು, ಮುಂಬೈನಲ್ಲಿ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು  ನಡೆಯಲಿದ್ದು, ಹರಾಜಿಗೂ ಮೊದಲೇ ಎಲ್ಲಾ 12 ತಂಡಗಳು ಸೇರಿ ಒಟ್ಟು 22 ಆಟಗಾರರನ್ನು ಉಳಿಸಿಕೊಂಡಿದ್ದವು. ಇದೀಗ ಉಳಿದ ಆಟಗಾರರನ್ನು ಖರೀದಿಸಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ.

ಪ್ರತಿ ತಂಡವು ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದ್ದು, ಸದ್ಯ ರೀಟೈನ್‌ ಆಗಿರುವ 88 ಆಟಗಾರರನ್ನು ಬಿಟ್ಟು ಇನ್ನೂ ಗರಿಷ್ಠ 212 ಆಟಗಾರರಿಗೆ ಅವಕಾಶವಿದೆ. ಈ ಸ್ಥಾನಗಳಿಗೆ ಮಿತಿಗೂ ಹೆಚ್ಚು ಆಟಗಾರರು ಪೈಪೋಟಿಯಲ್ಲಿದ್ದಾರೆ.

ಇದೀಗ ಆಟಗಾರರ ಖರೀದಿಗೆ ಪ್ರತಿ ತಂಡ ಒಟ್ಟು 5 ಕೋಟಿ ರು. ಬಳಸಬಹುದಾಗಿದೆ. ರೀಟೈನ್ ಮಾಡಿಕೊಂಡಿರುವ ಆಟಗಾರರಿಗೆ ನೀಡುವ ಸಂಭಾವನೆಯೂ ಇದರಲ್ಲಿ ಸೇರಿರಲಿದೆ.

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ವಿಭಾಗದಲ್ಲಿರುವ ಆಟಗಾರರ ಮೂಲಬೆಲೆ ₹30 ಲಕ್ಷ ಇದ್ದು, ‘ಬಿ’ ವಿಭಾಗದ ಆಟಗಾರರು ₹20 ಲಕ್ಷ, ‘ಸಿ’ ವಿಭಾಗದಲ್ಲಿರುವ ಆಟಗಾರರು ₹13 ಲಕ್ಷ ಹಾಗೂ ‘ಡಿ’ ವಿಭಾಗದಲ್ಲಿರುವ ಆಟಗಾರರು ₹9 ಲಕ್ಷ ಮೂಲಬೆಲೆ ಹೊಂದಿದ್ದಾರೆ.