Home News Suhas Shetty Murder Case: ಮೊನ್ನೆಯ ದಾಳಿಗೂ ಮುನ್ನ ಎರಡು ಬಾರಿ ಸುಹಾಸ್‌ ಶೆಟ್ಟಿ ಮೇಲೆ...

Suhas Shetty Murder Case: ಮೊನ್ನೆಯ ದಾಳಿಗೂ ಮುನ್ನ ಎರಡು ಬಾರಿ ಸುಹಾಸ್‌ ಶೆಟ್ಟಿ ಮೇಲೆ ಅಟ್ಯಾಕ್‌ ಮಾಡಲು ಪ್ರಯತ್ನ!

Hindu neighbor gifts plot of land

Hindu neighbour gifts land to Muslim journalist

Suhas Shetty Murder Case: ಮಂಗಳೂರು ಪೊಲೀಸರು ಸುಹಾಸ್‌ ಶೆಟ್ಟಿ ಪ್ರಕರಣವನ್ನು ಬೇಧಿಸಿದ್ದಾರೆ. 10 ಆರೋಪಿಗಳಲ್ಲಿ 8 ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಮಗೆ ದೊರಕಿರುವ ಮಾಹಿತಿಯನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ನೀಡಿದ್ದಾರೆ.

ಶಾಂತಿಗುಡ್ಡೆದ ನಿವಾಸಿ ಅಬ್ದುಲ್ ಸಫ್ವಾನ್ (27), ನಿಯಾಜ್ (25) ಮೊಹಮ್ಮದ್ ಮುಸ್ಸಾಮಿರ್ ( 32) ಕಲಂದರ್ ಶಫಿ ( 29), ಆದಿಲ್ ಮೆಹರೂಪ್ (27), ನಾಗರಾಜ್ (20), ಮೊಹಮದ್ ರಿಜ್ವಾನ್ (28) ಹಾಗೂ ರಂಜಿತ್​ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಇಲ್ಲಿ ಆದಿಲ್ ಮೆಹರೂಪ್, ಫಾಸಿಲ್ ಸಹೋದರ ಬಂಧಿತರು.

ಈ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳು ಇದ್ದಾರೆ. ಅಬ್ದುಲ್‌ ಸಫ್ವಾನ್‌ ಮತ್ತು ಫಾಝಿಲ್‌ ಸಹೋದರ ಆದಿಲ್‌ ಮೆಹರೂಪ್‌. 2023 ರಲ್ಲಿ ಸುಹಾಸ್‌ ಶೆಟ್ಟಿ ಗ್ಯಾಂಗ್‌ನಿಂದ ಸಫ್ವಾನ್‌ ಮೇಲೆ ಅಟ್ಯಾಕ್‌ ಆಗಿತ್ತು. ಪ್ರಶಾಂತ್‌, ಧನರಾಜ್‌ ಜೊತೆ ಸೇರಿ ಸುಹಾಸ್‌ ಶೆಟ್ಟಿ ದಾಳಿ ಮಾಡಿದ ಆರೋಪವಿತ್ತು. ಇದು ಸಫ್ವಾನ್‌ ಮತ್ತು ಸುಹಾಸ್‌ ಶೆಟ್ಟಿ ಮಧ್ಯೆ ದ್ವೇಷಕ್ಕೆ ಕಾರಣವಾಗಿದೆ.

ಮೊನ್ನೆಯ ದಾಳಿಗೂ ಮುನ್ನ ಎರಡು ಬಾರಿ ಸುಹಾಸ್‌ ಶೆಟ್ಟಿ ಮೇಲೆ ಅಟ್ಯಾಕ್‌ ಮಾಡಲು ಪ್ರಯತ್ನ ಪಡಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅನಂತರ ಸುಹಾಸ್‌ ಶೆಟ್ಟಿ ಕುರಿತು ಸಫ್ವಾನ್‌ ತಂಡಕ್ಕೆ ನಿಖರವಾಗಿ ತಿಳಿಯುತ್ತದೆ. ಸುಹಾಸ್‌ನನ್ನು ಕೊಲೆ ಮಾಡುವುದಕ್ಕೆ ಅಬ್ದುಲ್‌ ಸಫ್ವಾನ್‌ ತಿಂಗಳುಗಟ್ಟೆ ಪ್ಲ್ಯಾನ್‌ ಮಾಡಲಾಗಿತ್ತು. ಇದನ್ನು ಪ್ಲ್ಯಾನ್‌ ಮಾಡಿದ್ದು ಎ1 ಆರೋಪಿ ಅಬ್ದುಲ್‌ ಸಫ್ವಾನ್.‌ ಈತ 10 ಜನರ ತಂಡ ಕಟ್ಟಿದ್ದ. ಎರಡು ಬಾರಿ ಸುಹಾಸ್‌ ಶೆಟ್ಟಿ ಹತ್ಯೆಗೆ ಯತ್ನ ಮಾಡಿದ್ದ. ಆದರೆ ಅದು ಫೇಲ್‌ ಆಗಿತ್ತು. ಆದರೆ ಮೂರನೇ ಬಾರಿ ಮಾಡಿ ಪ್ಲ್ಯಾನ್‌ ವರ್ಕೌಟ್‌ ಆಗಿದೆ.

ಇವರು ಎರಡು ವಾಹನಗಳನ್ನು ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಒಂದು ಬುಲೆರೋ ಪಿಕಪ್‌, ಸ್ವಿಫ್ಟ್‌ ಕಾರು.

ಎರಡು ವಾಹನದಲ್ಲೂ ಏಳು ಮಂದಿ ಸುಹಾಸ್‌ ಶೆಟ್ಟಿಯನ್ನು ಚೇಸ್‌ ಮಾಡಿದ್ದು, ನಿರ್ದಿಷ್ಟ ಸ್ಥಳದಲ್ಲಿ ಪಿಕಪ್‌ ವಾಹನದಿಂದ ಅಪಘಾತ ಮಾಡಿ ಅಟ್ಯಾಕ್‌ ಮಾಡಿದ್ದಾರೆ.