Home News ಅತ್ತೆ ಮಾಡಿದ್ದ ಆರೋಪಗಳನ್ನು ಸುಳ್ಳೆಂದು ನಿರೂಪಿಸಲು ಕೆಂಡದ ಮೇಲೆ ನಡೆದ ಸೊಸೆ !?

ಅತ್ತೆ ಮಾಡಿದ್ದ ಆರೋಪಗಳನ್ನು ಸುಳ್ಳೆಂದು ನಿರೂಪಿಸಲು ಕೆಂಡದ ಮೇಲೆ ನಡೆದ ಸೊಸೆ !?

Hindu neighbor gifts plot of land

Hindu neighbour gifts land to Muslim journalist

ಹಿಂದಿನ ಕಾಲದಲ್ಲಿ ತಮ್ಮ ಮೇಲೆ ಬಂದಂತಹ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಹಲವು ರೀತಿಯ ಮೌಢ್ಯ ಪದ್ಧತಿಗಳನ್ನು ಆಚರಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಆ ರೀತಿಯ ಪದ್ಧತಿಗಳನ್ನು ಆಚರಿಸುತ್ತಾರೆ ಎಂಬುವುದನ್ನು ನಂಬಲು ಸ್ವಲ್ಪ ಕಷ್ಟವೇ ಸರಿ. ಇದಕ್ಕೆ ಉದಾಹರಣೆ ನೀಡಬಲ್ಲ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಅತ್ತೆಯ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಸೊಸೆ ಕೆಂಡದ ಮೇಲೆ ನಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಛಿಂದ್ವಾಡದ ಮಾವೂ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆಗಸ್ಟ್ 17ರಂದು ಅತ್ತೆ ಜೊತೆ ಮಹಿಳೆಯು ಬಾಬಾ ನನ್ನು ಭೇಟಿ ಮಾಡಲು ಬಂದಿದ್ದಳು. ಈ ವೇಳೆ ಬಾಬಾ ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸಿ, ಸುಳ್ಳು ಎಂದು ದೃಢಪಡಿಸಲು ಸೂಚಿಸಿದ್ದನು. ಇದಕ್ಕೂ ಮೊದಲು ಅತ್ತೆ ಬಂದು ಬಾಬಾನ ಮುಂದೆ ಸೊಸೆಯ ಬಗ್ಗೆ ಕಿವಿ ಊದಿದ್ದಳು ಎಂದು ವರದಿಯಾಗಿದೆ.

ನಿಮ್ಮ ಸೊಸೆ ಪತಿಗೆ ಆಹಾರದಲ್ಲಿ ಏನೋ ಸೇರಿಸಿ ಆತನನ್ನು ವಶ ಮಾಡಿಕೊಂಡಿದ್ದಾಳೆ. ಈ ಆರೋಪ ಸತ್ಯ ಆಗಿದ್ರೆ ಆಕೆ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಾಳೆ ಎಂದು ಬಾಬಾ ಹೇಳಿದ್ದನು. ಅಲ್ಲಿಯೇ ಕುಳಿತಿದ್ದ ಮಹಿಳೆ, ಬಾಬಾ ಮತ್ತು ಅತ್ತೆ ಇಬ್ಬರು ಆರೋಪಗಳನ್ನು ಸುಳ್ಳು ಎಂದು ನಿರೂಪಿಸಲು ಬೆಂಕಿ ಮೇಲೆ ನಡೆದಿದ್ದಾರೆ.

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಪತಿ, ನಮ್ಮ ಮನೆಯವರು ಮೌಢ್ಯಕ್ಕೆ ಒಳಗಾಗಿರೋದು ಮಾತ್ರ ಸತ್ಯ. ಆದ್ರೆ ಈ ಘಟನೆ ಬಳಿಕ ನಮ್ಮ ತಾಯಿಗೆ ಪತ್ನಿಯ ಮೇಲಿದ್ದ ಎಲ್ಲ ಅನುಮಾನಗಳು ನಿವಾರಣೆ ಆಗಿವೆ ಎಂದು ಹೇಳಿದ್ದಾರೆ.