Home News ಅತೀ ಹೆಚ್ಚು ಕ್ಲಿಷ್ಟಕರ ಅಪರಾಧಗಳನ್ನು ಬಯಲಿಗೆಳೆದಿದ್ದ ಆಕೆ ಇನ್ನು ಬರೀ ನೆನಪು!!ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು...

ಅತೀ ಹೆಚ್ಚು ಕ್ಲಿಷ್ಟಕರ ಅಪರಾಧಗಳನ್ನು ಬಯಲಿಗೆಳೆದಿದ್ದ ಆಕೆ ಇನ್ನು ಬರೀ ನೆನಪು!!ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು ಶ್ವಾನ ಸುಧಾ ಳ ಅಂತ್ಯಕ್ರಿಯೆ.

Hindu neighbor gifts plot of land

Hindu neighbour gifts land to Muslim journalist

ಮಂಗಳೂರಿನ ಅತೀ ಹೆಚ್ಚು ಅಪರಾಧಗಳನ್ನು ಬಯಲಿಗೆಳೆದಿದ್ದ ಆಕೆ, ಇದ್ದಕ್ಕಿದ್ದಂತೆ ಕಳೆದ ಮೂರು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಒಳಪಟ್ಟಿದ್ದರೂ, ಒಂದರೆಕ್ಷಣದಲ್ಲಿ ಉಸಿರುಚೆಲ್ಲಿ ಇಹಲೋಕವನ್ನೇ ತ್ಯಜಿಸಿದಳು.ಆಕೆಯ ಸಾವಿನಿಂದ ಇಡೀ ಇಲಾಖೆಗೇ ತುಂಬಲಾರದಷ್ಟು ನಷ್ಟ ಆಯಿತಾದರೂ,ಆಕೆಯ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.


ಹೌದು,ನಿನ್ನೆ ತಾನೇ ಮೃತಪಟ್ಟ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಶ್ವಾನ ಸುಧಾಳ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.ಕಳೆದ ಹತ್ತು ವರ್ಷಗಳಿಂದ ಮಂಗಳೂರು ಅಪರಾಧ ಜಗತ್ತಿನ ಅತೀ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದ ಶ್ವಾನ ಇದಾಗಿದ್ದು,ಇತ್ತೀಚಿಗೆ ಶ್ವಾಶಕೋಷದಲ್ಲಿ ಇದ್ದಂತಹ ಗಡ್ಡೆಯೊಂದು ಆಕೆಯ ಉಸಿರನ್ನೇ ನಿಲ್ಲಿಸಿದೆ.ಕಳೆದ ಕೆಳ ತಿಂಗಳಿನಿಂದ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಗುಣಮುಖವಾಗದೆ ಇಹಲೋಕವನ್ನೇ ತ್ಯಜಿಸಿದ್ದಾಳೆ ಸುಧಾ.ಈಕೆಯ ಅಂತ್ಯಕ್ರಿಯೆಯಲ್ಲಿ ಉನ್ನತಮಟ್ಟದ ಅಧಿಕಾರಿಗಳೂ ಕೂಡಾ ಭಾಗಿಯಾಗಿದ್ದು,ಸಿಬ್ಬಂದಿಗಳು ತನ್ನ ಅಚ್ಚುಮೆಚ್ಚಿನ ಶ್ವಾನದ ಅಗಲುವಿಕೆಯನ್ನು ಸಹಿಸಲಾರದೇ ಕಣ್ಣೀರಿನ ವಿದಾಯ ಸಲ್ಲಿಸಿದ್ದು ಎಲ್ಲರನ್ನು ಒಂದುಬಾರಿ ಮೌನವಾಗಿಸಿತು.