Home News Asia Oldest Elephant Vatsala Death: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಇನ್ನಿಲ್ಲ

Asia Oldest Elephant Vatsala Death: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಇನ್ನಿಲ್ಲ

Hindu neighbor gifts plot of land

Hindu neighbour gifts land to Muslim journalist

Asia Oldest Elephant Vatsala Death: ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದಲ್ಲಿರುವ ಅತ್ಯಂತ ಹಿರಿಯ ಆನೆ ಮತ್ತು ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲ್ಪಟ್ಟ ವತ್ಸಲಾ ಮಂಗಳವಾರ (ಜುಲೈ 8) ಕೊನೆಯುಸಿರೆಳೆದಿದೆ. ಈ ಆನೆಗೆ 100 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು.

ಅಧಿಕೃತ ಹೇಳಿಕೆಯ ಪ್ರಕಾರ, ವತ್ಸಲಾ ಆನೆ ಕಳೆದ ಕೆಲವು ದಿನಗಳಿಂದ ದೈಹಿಕವಾಗಿ ದುರ್ಬಲವಾಗಿತ್ತು. ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡಿತ್ತು. ಹಿನೌಟಾ ಪ್ರದೇಶದ ಖೈರೈಯಾನ್‌ ನಾಲಾ ಬಳಿ ಮಲಗಿದ್ದ ಈಕೆಯನ್ನು ಎದ್ದೇಳಲು ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಇದ್ದಿದ್ದು, ಕೊನೆಗೆ ಮಧ್ಯಾಹ್ನ 1.30 ರ ಸುಮಾರಿಗೆ ಮೃತ ಹೊಂದಿದೆ. ಅಭಯಾರಣ್ಯದ ಅಧಿಕಾರಿಗಳು ವತ್ಸಲಾಳ ಅಂತ್ಯಕ್ರಿಯೆಯನ್ನು ಪೂರ್ಣ ಗೌರವಗಳೊಂದಿಗೆ ನೆರವೇರಿಸಿದರು.

ಪಿಟಿಐ ವರದಿಗಳ ಪ್ರಕಾರ, ವತ್ಸಾಳಲನ್ನು ಮೊದಲು ಕೇರಳದಿಂದ ನರ್ಮದಾಪುರಂಗೆ ಕರೆತರಲಾಯಿತು ಮತ್ತು ನಂತರ ಪನ್ನಾ ಹುಲಿ ಅಭಯಾರಣ್ಯದಲ್ಲಿ ಇರಿಸಲಾಯಿತು. ವೃದ್ಧಾಪ್ಯದ ಕಾರಣ, ದೃಷ್ಟಿ ಕಳೆದುಕೊಂಡಿದ್ದ ಆನೆಗೆ ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ವತ್ಸಲಾಳನ್ನು ಗಸ್ತು ತಿರುಗುವಿಕೆಯಂತಹ ಕೆಲಸಗಳಿಂದ ಮುಕ್ತಗೊಳಿಸಲಾಯಿತು. ಹಿನುಟಾ ಆನೆ ಶಿಬಿರದಲ್ಲಿ ಇಡಲಾಗಿತ್ತು. ಅಲ್ಲಿ ಪ್ರತಿದಿನ ಸ್ನಾನ ಮಾಡಲು ಖೈರೈಯಾನ್ ನಾಲಾಕ್ಕೆ ಕರೆದೊಯ್ಯಲಾಗುತ್ತಿತ್ತು.