

Asaduddin Owaisi: ದೇವಾಲಯದ ಆವರಣದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ನೂತನ ಅಧ್ಯಕ್ಷ ಬಿಆರ್ ನಾಯ್ಡು ಇತ್ತೀಚೆಗೆ ಹೇಳಿದ್ದರು. ಬುಧವಾರ (ಅಕ್ಟೋಬರ್ 30), ಟಿಡಿಪಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು 24 ಸದಸ್ಯರೊಂದಿಗೆ ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ಹೊಸ ಮಂಡಳಿಯನ್ನು ರಚಿಸಿದೆ.
ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷ ಬಿಆರ್ ನಾಯ್ಡು ಅವರ ಈ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ಟಿಟಿಡಿಯ ನೂತನ ಅಧ್ಯಕ್ಷರ ನೆಪದಲ್ಲಿ ಮೋದಿ ಸರಕಾರದ ಉದ್ದೇಶಿತ ವಕ್ಫ್ ಕಾನೂನನ್ನು ಗುರಿಯಾಗಿಸಿದ್ದಾರೆ. ಟಿಟಿಡಿ ಮಂಡಳಿ ಅಧ್ಯಕ್ಷ ಬಿಆರ್ ನಾಯ್ಡು ಅವರ ಈ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರು ತಿರುಮಲದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಮೋದಿ ಸರ್ಕಾರವು ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರರನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲು ಬಯಸಿದೆ. ಹೆಚ್ಚಿನ ಹಿಂದೂ ದತ್ತಿ ಕಾನೂನುಗಳು ಹಿಂದೂಗಳು ಮಾತ್ರ ಅದರ ಸದಸ್ಯರಾಗಿರಬೇಕು ಎಂದು ಒತ್ತಾಯಿಸುತ್ತವೆ. ಒಬ್ಬರಿಗೆ ಸರಿ ಎನಿಸುವ ನಿಯಮ ಮತ್ತೊಬ್ಬರಿಗೆ ಸರಿಯಾಗಬೇಕು, ಇದು ಸರಿಯೇ?” ಎಂದು ಬರೆದಿದ್ದಾರೆ.
ಅಧ್ಯಕ್ಷರಾದ ನಂತರ ಬಿ.ಆರ್.ನಾಯ್ಡು ಅವರು, “ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಹಿಂದೂ ಆಗಿರಬೇಕು. ಇದು ನನ್ನ ಮೊದಲ ಪ್ರಯತ್ನ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು ಅದನ್ನು ಪರಿಶೀಲಿಸಬೇಕು” ಎಂದು ಹೇಳಿದ್ದರು. ಮುಂದೆ ಅನ್ಯ ಧರ್ಮದ ನೌಕರರ ಭವಿಷ್ಯದ ಬಗ್ಗೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಅವರಿಗೆ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ನೀಡುವ ಅಥವಾ ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಸಾಧ್ಯತೆಯನ್ನು ಪರಿಗಣಿಸುವುದಾಗಿಯೂ ಅವರು ಹೇಳಿದ್ದರು.













