Home News Arecanut: ಅಡಕೆ ನಿಷೇಧ ಮಾಡಲು ʼWHO” ಕರೆ

Arecanut: ಅಡಕೆ ನಿಷೇಧ ಮಾಡಲು ʼWHO” ಕರೆ

Arecanut

Hindu neighbor gifts plot of land

Hindu neighbour gifts land to Muslim journalist

Arecanut: ವಿಶ್ವ ಆರೋಗ್ಯ ಸಂಸ್ಥೆ (WHO) ಕ್ಯಾನ್ಸರ್‌ ಕಾರಕ ನೆಪದಲ್ಲಿ ಅಡಕೆ ನಿಷೇಧ ಮಾಡಲು ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಅಡಿಕೆ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ವಿಶ್ವ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶ ಅಕ್ಟೋಬರ್‌ 16 ರಂದು ಮುಗಿದಿದೆ.

ಭಾರತ, ಬಾಂಗ್ಲಾ, ಭೂತಾನ್‌, ಉತ್ತರ ಕೊರಿಯಾ, ಮಾಲ್ಡೀವ್ಸ್‌, ಮಯನ್ಮಾರ್‌, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್‌ ಮೊದಲಾದ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಕ್ಯಾನ್ಸರ್‌ ಕಾರಕ ವಸ್ತುಗಳ ವಿಚಾರದಲ್ಲಿ ಸಮಾವೇಶದಲ್ಲಿ ಚರ್ಚೆ ನಡೆದಿದೆ. ಈ ಸಮಾವೇದಲ್ಲಿ ದೇಶಗಳಲ್ಲಿ ಒಟ್ಟಾಗಿ 28ಕೋಟಿ ವಯಸ್ಕರು, 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್‌ ಮತ್ತಿತರ ವ್ಯಸನಿಗಳಿದ್ದಾರೆ. ಇವುಗಳ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಇದರಲ್ಲಿ ಅಡಕೆಯನ್ನು ಕೂಡಾ ಸೇರಿಸಲಾಗಿದೆ.

ಹೊಗೆರಹಿತ ತಂಬಾಕು, ನಿಕೋಟಿನ್‌, ಅಡಿಕೆ ಉತ್ಪಾದನೆ ಹಾಗೂ ಮಾರಾಟ ಇತ್ಯಾದಿಗಳ ಮೇಲೆ ನಿಯಂತ್ರಣಕ್ಕೆ ಚೌಕಟ್ಟು, ರಾಷ್ಟ್ರೀಯ ಶಾಸಕ ತರಬೇಕು, ಉತ್ಪಾದನೆ, ಮಾರಾಟ, ಜಾಹೀರಾತು ಪ್ರಚಾರ, ಪ್ರಾಯೋಜಕತ್ವ ನಿಷೇಧಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಿದೆ. ಅಡಿಕೆ ಸಹಿತ ಎಲ್ಲಾ ಉತ್ಪನ್ನಗಳನ್ನು ನಿಷೇಧ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.