Home News Areca nut : ಅಡಿಕೆಗೆ ವಕ್ಕರಿಸುತ್ತಿದೆ ‘ಚೆಂಡೆಕೊಳೆ ರೋಗ’ – ರೋಗದ ಹೊಡೆತಕ್ಕೆ ನಲುಗಿದ ಬೆಳೆಗಾರರು,...

Areca nut : ಅಡಿಕೆಗೆ ವಕ್ಕರಿಸುತ್ತಿದೆ ‘ಚೆಂಡೆಕೊಳೆ ರೋಗ’ – ರೋಗದ ಹೊಡೆತಕ್ಕೆ ನಲುಗಿದ ಬೆಳೆಗಾರರು, ಏನಿದರ ಲಕ್ಷಣ?

Hindu neighbor gifts plot of land

Hindu neighbour gifts land to Muslim journalist

Areca nut : ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ(Areca nut) ಬೆಳೆಗಾರರಿಗೆ ಕೆಲವು ದಿನಗಳ ಹಿಂದೆ ಚೀನಿ ವೈರಸ್ ವಕ್ಕರಿಸಿ ದೊಡ್ಡ ತಲೆನೋವು ಉಂಟಾಗಿತ್ತು. ಆದರೀಗ ಈ ಬೆನ್ನಲ್ಲೇ ಚೆಂಡೆಕೊಳೆ ರೋಗ (ಕ್ರೋನ್‌ ರೂಟ್‌) ಕಾಣಿಸಿಕೊಂಡಿದ್ದು ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಹೌದು, ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ ಬರುತ್ತಿತ್ತು. ಆದರೀಗ ಚೆಂಡೆಕೊಳೆ ರೋಗ ಎದುರಾಗಿದೆ. ಅಂದಹಾಗೆ ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಚೆಂಡೆಕೊಳೆ ರೋಗ (ಕ್ರೋನ್‌ ರೂಟ್‌) ಕಾಣಿಸಿಕೊಂಡಿದ್ದು ಬಾಧಿತ ಮರಗಳು ಕ್ರಮೇಣ ಸತ್ತು ಹೋಗುವುದರಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಳಲ್ಲಿ ಈ ರೋಗ ಲಕ್ಷಣವನ್ನು ದೃಢಪಡಿಸಿದ್ದಾರೆ.

ರೋಗ ಲಕ್ಷಣ ಏನು?
ಅಡಿಕೆ ಕೊಳೆ ರೋಗಕ್ಕೆ ಪೈಟೋಪ್‌ಥೋರ ಮೀಡಿಯೈ ಶಿಲೀಂಧ್ರವೇ ಕಾರಣವಾಗಿದ್ದು, ಹೆಚ್ಚು ಕಾಯಿ ಇರುವ ಮತ್ತು ಹಳೆ ಅಡಿಕೆ ಮರದಲ್ಲಿ ಈ ರೋಗ ಕಂಡು ಬರುತ್ತದೆ. ಈ ರೋಗವು ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಪ್ರಾರಂಭವಾಗಿ ಡಿಸೆಂಬರ್‌-ಜನವರಿ ವರೆಗೂ ಇರುತ್ತದೆ. ಪ್ರಾರಂಭದ ಲಕ್ಷಣವಾಗಿ ಹಸುರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತವೆ.

ಸುಳಿ ಗರಿ ತುಂಬಾ ಸಮಯ ಹಸುರಾಗಿ ಉಳಿದು ತದನಂತರ ಒಣಗಿ ಚೆಂಡೆ ಭಾಗ ಕಳಚಿ ಬೀಳುತ್ತದೆ. ಅಡಿಕೆ ಹಾಳೆಯ ಒಳ ಬುಡ ಭಾಗದಲ್ಲಿ ಕಂದು ಬಣ್ಣ ಕಾಣಬಹುದು. ಅಡಿಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶಿಲೀಂಧ್ರ ಪ್ರವೇಶಿಸಿ ಕಾಂಡದ ಒಳಭಾಗವನ್ನು ಪೂರ್ಣ ಕೊಳೆಯುವಂತೆ ಮಾಡುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ರೋಗ ಹರಡಲು ಅಸಮರ್ಪಕ ಬೋರ್ಡೊ ಸಿಂಪರಣೆ ಕೂಡ ಒಂದು ಕಾರಣವಾಗಿರಬಹುದು. ಅಡಿಕೆ ಕೊಳೆ ರೋಗ ನಿಯಂತ್ರಣ ಕ್ರಮಗಳನ್ನು ಪೂರ್ಣವಾಗಿ ಅನುಸರಿಸುವ ರೈತರ ತೋಟಗಳಲ್ಲಿ ಈ ರೋಗದ ಬಾಧೆ ಕಡಿಮೆ. ಹೀಗಾಗಿ ಈ ರೋಗವನ್ನು ಸಮಗ್ರ ನಿಯಂತ್ರಣ ಕ್ರಮಗಳಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.