Home News LPG ಸಿಲಿಂಡರ್ ಡೆಲಿವರಿಗೆ ಜಾಸ್ತಿ ಹಣ ಕೇಳ್ತಾರಾ? ಹಾಗಿದ್ರೆ ಈ ನಂಬರ್ ಗೆ ಕಾಲ್ ಮಾಡಿ,...

LPG ಸಿಲಿಂಡರ್ ಡೆಲಿವರಿಗೆ ಜಾಸ್ತಿ ಹಣ ಕೇಳ್ತಾರಾ? ಹಾಗಿದ್ರೆ ಈ ನಂಬರ್ ಗೆ ಕಾಲ್ ಮಾಡಿ, ದೂರು ನೀಡಿ!!

Hindu neighbor gifts plot of land

Hindu neighbour gifts land to Muslim journalist

 

LPG: ಮನೆಯಲ್ಲಿ ಗ್ಯಾಸ್ ಖಾಲಿಯಾಗಿ ಸಿಲಿಂಡರನ್ನು ಬುಕ್ ಮಾಡಿದಾಗ ಏಜೆನ್ಸಿಯ ಹುಡುಗರು ಬಂದು ಮನೆಗೆ ಎಲ್ಪಿಜಿ ಸಿಲೆಂಡರ್ ಕೊಟ್ಟು ಹೋಗುತ್ತಾರೆ. ಈ ವೇಳೆ ಏನಾದರೂ ಡೆಲಿವರಿ ವೇಳೆ ಹುಡುಗರು ಹೆಚ್ಚಿನ ಹಣವನ್ನು ಕೇಳಿದರೆ ನೀವು ಹಣ ಪಾವತಿಸುವ ಬದಲು ಈ ಒಂದು ನಂಬರಿಗೆ ಫೋನ್ ಮಾಡಿ ದೂರು ನೀಡಬಹುದಾಗಿದೆ.

ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡತಕ್ಕದ್ದು. ಅವರ ಮನೆಗೆ ತಲುಪಿಸತಕ್ಕದ್ದು. ಈ ವೇಳೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ.

ಯಸ್, ಸರ್ಕಾರದ ಆದೇಶದನ್ವಯ ಈ ಕೆಳಗಿನಂತೆ ಗೃಹೊಪಯೋಗಿ ಗ್ಯಾಸ್ ಸಿಲಿಂಡರ್ ಗೆ ನಾಗರಿಕ ತಿದ್ದುಪಡಿಯಲ್ಲಿ ನಿಗಧಿಪಡಿಸಿರುವಂತೆ Up to 5.00 kms free (no charges), Beyond 5 kms for every round trip km- Rs.1.60 per cylinder (Rs. One Rupee sixty paise only) ಸಿಲಿಂಡರನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದಲ್ಲಿ, ಜಂಟಿ ನಿರ್ದೇಶಕರ ಕಚೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹಾಸನ ಕಾರ್ಯಾಲಯಕ್ಕೆ ಹಾಗೂ ಕಛೇರಿಯ ದೂರವಾಣಿ ಸಂಖ್ಯೆ 08172-268229 ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಯ ಆಹಾರ ಶಾಖೆಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.