Home News Dharmasthala Case: ಸ್ಥಳ ಸಂಖ್ಯೆ 1 ರಲ್ಲಿ SIT ತಂಡದ ವೃತ್ತಿಪರತೆ ಮತ್ತು ಸಂಪೂರ್ಣ ಪರಿಶೀಲನೆಯ...

Dharmasthala Case: ಸ್ಥಳ ಸಂಖ್ಯೆ 1 ರಲ್ಲಿ SIT ತಂಡದ ವೃತ್ತಿಪರತೆ ಮತ್ತು ಸಂಪೂರ್ಣ ಪರಿಶೀಲನೆಯ ಮೆಚ್ಚುಗೆ – ಅಡ್ವೊಕೇಟ್ ಮಂಜುನಾಥ್ ಎನ್ ಪತ್ರಿಕಾ ಪ್ರಕಟಣೆ

Hindu neighbor gifts plot of land

Hindu neighbour gifts land to Muslim journalist

Dharmasthala Case: ನಿನ್ನೆ ಸ್ಥಳ ಸಂಖ್ಯೆ 1ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ಬ್ಲೌಸ್, ಪ್ಯಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಈ ಬೆಳವಣಿಗೆಯ ನಂತರ SIT ತೆಗೆದುಕೊಂಡ ಮುಂದಿನ ಕ್ರಮಗಳು ಶ್ಲಾಘನೀಯ ಎಂದು ಅನನ್ಯಾ ಭಟ್‌ ಅವರ ಕೇಸ್‌ ನಡೆಸುತ್ತಿರುವ ವಕೀಲರಾದ ಮಂಜುನಾಥ್‌ ಎನ್‌ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಸ್ಥಳವನ್ನು 10 ಅಡಿ ಆಳವರೆಗೆ ಉತ್ಖನನ ಮಾಡುವ ಕಷ್ಟಕರ ಮತ್ತು ದೈಹಿಕವಾಗಿ ಸವಾಲಿನ ಕಾರ್ಯವನ್ನು ಮುಂದುವರಿಸುವ SIT ನಿರ್ಧಾರವು ಅವರ ವೃತ್ತಿಪರ ಬದ್ಧತೆಯನ್ನು ತೋರಿಸುತ್ತದೆ. ಈ ಕ್ರಮವು ಪ್ರತಿಯೊಂದು ಸಣ್ಣ ಸುಳಿವು ಕೂಡ ಮಿಸ್ ಆಗದಂತೆ ಸಂಪೂರ್ಣ ಶೋಧ ನಡೆಸುವ ಅವರ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಗುರುತಿಸಬಹುದಾದ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳ ಪತ್ತೆ (ಒಂದರಲ್ಲಿ ಪುರುಷರ ಹೆಸರು, ಮತ್ತೊಂದರಲ್ಲಿ ಮಹಿಳೆಯ ಹೆಸರು “ಲಕ್ಷ್ಮಿ”) ಮುಂದಿನ ತನಿಖೆಗೆ ಹೊಸ ದಾರಿಯನ್ನು ಒದಗಿಸುತ್ತದೆ. ನಾವು SIT ಈ ಪ್ರಮುಖ ಸುಳಿಗಳನ್ನು ಗಂಭೀರವಾಗಿ ಹಾಗೂ ತ್ವರಿತವಾಗಿ ಅನುಸರಿಸುವುದಾಗಿ ನಂಬಿದ್ದೇವೆ. SIT ತೋರಿಸಿರುವ ಗಂಭೀರತೆ ಮತ್ತು ಪರಿಶ್ರಮ ನಮಗೆ ಹೊಸ ಭರವಸೆಯನ್ನು ನೀಡಿದೆ. ಉಳಿದ ಸ್ಥಳಗಳಲ್ಲಿ ನಡೆಯಲಿರುವ ಅವರ ಕಾರ್ಯಕ್ಕೆ ನಾವು ಸಂಪೂರ್ಣ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.