Home News Puttur: ಪುತ್ತೂರಿಗೆ 500 ಚಾಲಕ ನಿರ್ವಾಹಕರನ್ನು ನೇಮಿಸಿ: ಸಾರಿಗೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

Puttur: ಪುತ್ತೂರಿಗೆ 500 ಚಾಲಕ ನಿರ್ವಾಹಕರನ್ನು ನೇಮಿಸಿ: ಸಾರಿಗೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು (Puttur) ಕೆಎಸ್‌ ಆರ್ ಟಿಸಿ ಡಿಪೋಗೆ 500 ಬಸ್ ಚಾಲಕ ಹಾಗೂ ನಿರ್ವಾಹಕರನ್ನು ನೇಮಿಸುವಂತೆ ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಶಾಸಕ ಆಶೋಕ್‌ ರೈ ಅವರು ಮನವಿ ಮಾಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಚಾಲಕ ಮತ್ತು ನಿರ್ವಾಹಕರ ಕೊರತೆಯಿಂದ ಕೆಲವು ರೂಟ್ ಗಳಲ್ಲಿ ಬಸ್‌ ಸಂಚಾ ಮಾಡಲು ಅಸಾಧ್ಯವಾಗಿದೆ. ಪುತ್ತೂರು ತಾಲೂಕಿನ ಬಹುತೇಕ ಗ್ರಾಮಗಳ ಜನತೆ ನಿತ್ಯ ಸಂಚಾರಕ್ಕೆ ಸರಕಾರಿ ಬಸ್ ಗಳನ್ನೇ ಅವಲಂಬಿತರಾಗಿದ್ದಾರೆ. ಬಸ್ ಇದ್ದರೂ ಚಾಲಕ,ನಿರ್ವಾಹಕರಿಲ್ಲದೇ ಇದ್ದರೆ ಏನು ಪ್ರಯೋಜನ ಎಂದು ಸಚಿವರ ಗಮನಕ್ಕೆ ತಂದ ಶಾಸಕರು ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಪುತ್ತೂರಿಗೆ 500 ಜನ ಚಾಲಕ ನಿರ್ವಾಹಕರನ್ನು ಏಕಕಾಲದಲ್ಲಿ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.